ಮುಸ್ಲಿಮರಿಗೆ ನಿಷೇಧ ವಿಧಿಸುವುದು ಸಲಹೆಯಷ್ಟೇ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಮತ್ತೆ ಮುಸ್ಲಿಮರಿಗೆ ನಿಷೇಧ ವಿಧಿಸುವುದರ ಬಗ್ಗೆ ಮಾತನಾಡಿದ್ದು, ಅದೊಂದು ಸಲಹೆಯಷ್ಟೇ ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಮತ್ತೆ ಮುಸ್ಲಿಮರಿಗೆ ನಿಷೇಧ ವಿಧಿಸುವುದರ ಬಗ್ಗೆ ಮಾತನಾಡಿದ್ದು, ಅದೊಂದು ಸಲಹೆಯಷ್ಟೇ ಎಂದು ತಿಳಿಸಿದ್ದಾರೆ.

ಅಲ್ಲಿನ ಫಾಕ್ಸ್ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ಮುಸ್ಲಿಮರಿಗೆ ನಿಷೇಧ ವಿಧಿಸುವ ಬಗ್ಗೆ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡಿರುವ ಸೂಚನೆ ನೀಡಿದ್ದಾರೆ. ಅಮೆರಿಕಾದಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದೇವೆ. ಮುಸ್ಲಿಮರಿಗೆ ಅಮೆರಿಕ ಪ್ರವೇಶಿಸದಂತೆ  ತಾತ್ಕಾಲಿಕ ನಿಷೇಧ ವಿಧಿಸುವುದು ಕೇವಲ ಸಲಹೆಯಷ್ಟೇ. ನಿಷೇಧ ಜಾರಿಗೆ ಬಂದಿಲ್ಲ. ಅಮೆರಿಕಾದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳುವವರೆಗೂ ಈ ರೀತಿಯ ತಾತ್ಕಾಲಿಕ ನಿಷೇಧ ವಿಧಿಸುವ ಸಲಹೆಯನ್ನು ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಇಸ್ಲಾಂ ಗೂ ಭಯೋತ್ಪಾದನೆಗೂ ನಂಟು ಕಲ್ಪಿಸುವುದನ್ನು ಬಿಡದ ಟ್ರಂಪ್, ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ ವಿಶ್ವಾದ್ಯಂತ ಇದೆ. ಪ್ಯಾರಿಸ್, ಸ್ಯಾನ್ ಬರ್ನಾರ್ಡಿನೊ ಗೆ ಹೋದರೂ ಇಂತಹ ಭಯೋತ್ಪಾದನೆ ಕಾಣಬಹುದು ಎಂದು ಟ್ರಂಪ್ ತಿಳಿಸಿದ್ದಾರೆ.

ಬ್ರಿಟನ್ ನಲ್ಲಿ ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಗೊಂಡಿರುವ ಸಾದಿಕ್ ಖಾನ್ ಅವರಿಗೆ ಅಮೆರಿಕ ಭೇಟಿಗೆ ಅವಕಾಶ ನೀಡುವುದಾಗಿ ತಿಳಿಸಿದ ನಂತರ ಡೊನಾಲ್ಡ್ ಟ್ರಂಪ್ ಮುಸ್ಲಿಮರಿಗೆ ಅಮೆರಿಕ ಪ್ರವೇಶಿಸುವುದರಿಂದ ನಿಷೇಧ ವಿಧಿಸುವ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com