ನಾನು ಅವಿವೇಕಿಯಲ್ಲ: ಮುಸ್ಲಿಮರ ನಿಷೇಧದ ಕುರಿತು ಬ್ರಿಟನ್ ಪ್ರಧಾನಿಯ ಟೀಕೆಗೆ ಟ್ರಂಪ್ ಪ್ರತಿಕ್ರಿಯೆ

ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಹಾಗೂ ಬ್ರಿಟನ್ ಪ್ರಧಾನಿಯ ಸಂಬಂಧ ಉತ್ತಮವಾಗಿರುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಲಂಡನ್: ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಹಾಗೂ ಬ್ರಿಟನ್ ಪ್ರಧಾನಿಯ ಸಂಬಂಧ ಉತ್ತಮವಾಗಿರುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ಮುಸ್ಲಿಮರಿಗೆ ಅಮೆರಿಕ ಪ್ರವೆಶದಿಂದ ನಿಷೇಧ ವಿಧಿಸುವ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವನೆಯನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಟೀಕಿಸಿದ್ದೇ ಇದಕ್ಕೆ ಕಾರಣವಾಗಿದೆ.
ಡೇವಿಡ್ ಕೆಮರೂನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ನಾನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಕೆಮರೂನ್ ಅವರೊಂದಿಗೆ ಸೌಹಾರ್ದಯುತ ಸಂಬಂಧ ಉಳಿಸಿಕೊಳ್ಳಲು ಬಯಸಿದ್ದೆ ಆದರೆ ಅವರೇ ಅದಕ್ಕೆ ಸಿದ್ಧರಿಲ್ಲದಂತೆ ತೋರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ನಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಹೊಂದುವುದಿಲ್ಲ ಎಂಬಂತೆ ತೋರುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕಾಗೆ ಮುಸ್ಲಿಮರು ಪ್ರವೇಶಿಸುವುದಕ್ಕೆ ತಾತ್ಕಾಲಿಕ ನಿಷೇಧ ವಿಧಿಸಬೇಕೆಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಬ್ರಿಟನ್ ನಲ್ಲಿ ಮುಸ್ಲಿಮರೊಬ್ಬರು ಮೊದಲ ಮೇಯರ್ ಆಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಮಾತ್ರ ಅಮೆರಿಕ ಪ್ರವೇಶ  ಮಾಡುವುದಕ್ಕೆ ವಿನಾಯ್ತಿ ನೀಡುವುದಾಗಿ ಟ್ರಂಪ್ ಹೇಳಿದ್ದರು. ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಮರಿಗೆ ತಾತ್ಕಾಲಿಕ ನಿಷೇಧ ವಿಧಿಸುವ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯಿಸಿದ್ದ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್, ಟ್ರಂಪ್ ಅವರ ನಿರ್ಧಾರ ಒಡಕುಂಟುಮಾಡುವ ಅವಿವೇಕಿ ನಿರ್ಧಾರ ಎಂದು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com