ಹಿರೋಶಿಮಾ ಮೇಲೆ ಬಾಂಬ್ ದಾಳಿ ನಡೆದಿದ್ದು ವಿಷಾದನೀಯ: ಜಪಾನ್ ವಿದೇಶಾಂಗ ಸಚಿವ

ಜಪಾನ್ ನ ವಿದೇಶಾಂಗ ಸಚಿವ ಫುಮಿದೊ ಖಿಶಿದ ಹಿರೋಶಿಮಾ ಮೇಲೆ ಅಣು ಬಾಂಬ್ ದಾಳಿ ನಡೆದಿದ್ದು ವಿಷಾದನೀಯ ಎಂದು ಹೇಳಿದ್ದಾರೆ.
ಜಪಾನ್ ವಿದೇಶಾಂಗ ಸಚಿವ  ಫುಮಿದೊ ಖಿಶಿದ
ಜಪಾನ್ ವಿದೇಶಾಂಗ ಸಚಿವ ಫುಮಿದೊ ಖಿಶಿದ

ಟೋಕಿಯೋ:  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಯುಎಸ್ ನಿಂದ ಅಣು ಬಾಂಬ್ ಪ್ರಯೋಗಕ್ಕೆ ತುತ್ತಾದ ಹಿರೋಶಿಮಾ ನಗರಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಜಪಾನ್ ನ ವಿದೇಶಾಂಗ ಸಚಿವ ಫುಮಿದೊ ಖಿಶಿದ ಪ್ರತಿಕ್ರಿಯೆ ನೀಡಿದ್ದು, ಹಿರೋಶಿಮಾ ಮೇಲೆ ಅಣು ಬಾಂಬ್ ದಾಳಿ ನಡೆದಿದ್ದು ವಿಷಾದನೀಯ ಎಂದು ಹೇಳಿದ್ದಾರೆ.

ಹಿರೋಶಿಮಾ-ನಾಗಸಾಕಿ ಮೇಲೆ ಅಣು ಬಾಂಬ್ ದಾಳಿ ನಡೆಸಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದಾಗಿದ್ದು,  ಎರಡೂ ನಗರಗಳ ಮೇಲೆ ಅಣು ದಾಳಿ ನಡೆಸಿದ್ದು ವಿಷಾದನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೇ.27 ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಿರೋಶಿಮಾ ಗೆ ಭೇಟಿ ನೀಡಲಿದ್ದರೆ. ಇದಕ್ಕೂ ಮುನ್ನ ಜಪಾನ್ ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅವರು  ಹಿರೋಶಿಮಾ ಮೇಲೆ ಅಮೆರಿಕ ಅಣು ಬಾಂಬ್ ಪ್ರಯೋಗಿಸಿದ ಘಟನೆ ಬಗ್ಗೆ ಕ್ಷಮೆ ಕೋರುವುದಿಲ್ಲ  ಎಂದು ಹೇಳಿದ್ದರು. ಈ ಬೆನ್ನಲ್ಲೇ ಜಪಾನ್ ನ ವಿದೇಶಾಂಗ ಸಚಿವರು, ಸಾವಿರಾರು ಜನರ ಪ್ರಾಣಕ್ಕೆ ಕುತ್ತಾದ ಹಿರೋಶಿಮಾ ಘಟನೆ ವಿಷಾದನೀಯ ಎಂದು ಹೇಳಿದ್ದಾರೆ. 

ಅಣು ಬಾಂಬ್ ಪ್ರಯೋಗದ ನಂತರ ಅಮೆರಿಕ ಅಧ್ಯಕ್ಷರೊಬ್ಬರು ಮೊದಲ ಬಾರಿಗೆ ಹಿರೋಶಿಮಾ ನಗರಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com