ಸ್ವಿಜರ್​ಲೆಂಡ್​ನಲ್ಲಿ ವಿಶ್ವದ ಅತಿ ಉದ್ದದ ರೈಲು ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ

ಸ್ವಿಜರ್​ಲೆಂಡ್​ನಲ್ಲಿ ವಿಶ್ವದ ಅತಿ ಉದ್ದವಾದ ಹಾಗೂ ಆಳವಾದ ರೈಲ್ವೆ ಸುರಂಗ ಮಾರ್ಗವನ್ನು ಬುಧವಾರ ಅಧಿಕೃತವಾಗಿ ಸಂಚಾರ ಮುಕ್ತಗೊಳಿಸಲಾಗಿದೆ.
ಸುರಂಗ ಮಾರ್ಗ
ಸುರಂಗ ಮಾರ್ಗ
ಜೆನೆವಾ: ಸ್ವಿಜರ್​ಲೆಂಡ್​ನಲ್ಲಿ ವಿಶ್ವದ ಅತಿ ಉದ್ದವಾದ ಹಾಗೂ ಆಳವಾದ ರೈಲ್ವೆ ಸುರಂಗ ಮಾರ್ಗವನ್ನು ಬುಧವಾರ ಅಧಿಕೃತವಾಗಿ ಸಂಚಾರ ಮುಕ್ತಗೊಳಿಸಲಾಗಿದೆ.
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಲಿ ಪ್ರಧಾನಿ ಮಟ್ಟೆವೋ ರೆಂಝಿ ರೈಲ್ವೆ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದರು.
ಸುಮಾರು ಎರಡು ದಶಕಗಳಿಂದ ನಿರ್ಮಿಸಲಾಗುತ್ತಿದ್ದ ಒಟ್ಟು 57ಕಿ.ಮೀ ಉದ್ದದ ಮತ್ತು 2.5 ಕಿ.ಮೀ ಆಳದಲ್ಲಿರುವ ಈ ಸುರಂಗಮಾರ್ಗ ಇಂದು ಸಂಚಾರಕ್ಕೆ ಮುಕ್ತವಾಗಿದ್ದು, 
ಈ ಮೂಲಕ ಜಪಾನ್​ನಲ್ಲಿರುವ 53.9 ಕಿ.ಮೀ ಉದ್ದದ ರೈಲ್ವೆ ಸುರಂಗ ಮಾರ್ಗವನ್ನು ಹಿಂದಿಕ್ಕಿದೆ. 
1947ರಲ್ಲೇ ಈ ಸುರಂಗ ಮಾರ್ಗದ ನೀಲನಕ್ಷೆ ತಯಾರಾಗಿದ್ದರೂ ನಿರ್ಮಾಣ ಕೆಲಸ ಮಾತ್ರ 1992ರಲ್ಲಿ ಆರಂಭಗೊಂಡಿತ್ತು.
ನಿರ್ಮಾಣ ಹಂತದಲ್ಲಿ ಏಳು ಕಾರ್ವಿುಕರನ್ನು ಬಲಿಪಡೆದ ಈ ಸುರಂಗ ಮಾರ್ಗದ ಕಾರ್ಯ 12 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 57 ಕಿ.ಮೀ ಉದ್ದವಿರುವ ರೈಲ್ವೆ ಸುರಂಗವನ್ನು ಕ್ರಮಿಸಲು ರೈಲು 17 ನಿಮಿಷ ತೆಗೆದುಕೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com