ಬ್ರಿಟನ್ ವೀಸಾ ನೀತಿಗಳಲ್ಲಿ ಬದಲಾವಣೆ: ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ

ಹೆಚ್ಚುತ್ತಿರುವ ವಲಸೆ ಬರುವವರ ಸಂಖ್ಯೆಗೆ ಕಡಿವಾಣ ಹಾಕಲು ಬ್ರಿಟನ್ ತನ್ನ ವೀಸಾ ನೀತಿಗಳಲ್ಲಿ ಬದಲಾವಣೆ ತಂದಿದ್ದು, ಅಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಬ್ರಿಟನ್ ವೀಸಾ ನೀತಿಗಳಲ್ಲಿ ಬದಲಾವಣೆ: ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ
ಬ್ರಿಟನ್ ವೀಸಾ ನೀತಿಗಳಲ್ಲಿ ಬದಲಾವಣೆ: ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ
ಲಂಡನ್: ಹೆಚ್ಚುತ್ತಿರುವ ವಲಸೆ ಬರುವವರ ಸಂಖ್ಯೆಗೆ ಕಡಿವಾಣ ಹಾಕಲು ಬ್ರಿಟನ್ ತನ್ನ ವೀಸಾ ನೀತಿಗಳಲ್ಲಿ ಬದಲಾವಣೆ ತಂದಿದ್ದು, ಅಲ್ಲಿರುವ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. 
ಹೊಸ ವೀಸಾ ನೀತಿಯನ್ನು ಘೋಷಿಸಿರುವ ಯುಕೆ ಗೃಹ ಕಚೇರಿ ( ಹೋಮ್ ಆಫಿಸ್)  ನವೆಂಬರ್ 24 ರ ನಂತರ ಟೈರ್ 2 ವೀಸಾ ಇಂಟ್ರಾ ಕಂಪನಿ ಟ್ರಾನ್ಸ್ಫರ್(ಐಸಿಟಿ) ವಿಭಾಗದಲ್ಲಿ ವೀಸಾಗಾಗಿ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ವೇತನ ಮಿತಿಯನ್ನು ಹೆಚ್ಚಿಸಲಾಗಿದ್ದು, ಈ ಹಿಂದೆ ಇದ್ದ 20,800 ಪೌಂಡ್ ಗಳ ಬದಲಾಗಿ  ಕನಿಷ್ಠ 30,000 ಪೌಂಡ್ ಗಳ ವೇತನವನ್ನು ಹೊಂದಿರಬೇಕಾಗುತ್ತದೆ.   
ಬ್ರಿಟನ್ ನ ವಲಸೆ ಸಲಹಾ ಸಮಿತಿಯ ಮಾಹಿತಿ ಪ್ರಕಾರ ಐಸಿಟಿ ವಿಭಾಗದಲ್ಲಿ ನೀಡಲಾಗುವ ವೀಸಾದ ಶೇ.90 ರಷ್ಟು ವೀಸಾವನ್ನು ಭಾರತೀಯ ಐಟಿ ಉದ್ಯೋಗಿಗಳು ಪಡೆಯುತ್ತಾರೆ. ಐಸಿಟಿ ವಿಭಾಗದಲ್ಲಿ ಭಾರತೀಯ ಐಟಿ ನೌಕರರೇ ಅತಿ ಹೆಚ್ಚು ಅರ್ಜಿ ಸಲ್ಲಿಸುವುದರಿಂದ ವೀಸಾ ನೀತಿ ಬದಲಾವಣೆಯಾಗಿರುವುದು ಭಾರತೀಯ ಐಟಿ ನೌಕರರ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಬ್ರಿಟನ್ ಪ್ರಧಾನಿ ಥೆರೆಸಾ ಮೇ ಭಾರತಕ್ಕೆ ಮೂರೂ ದಿನಗಳ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಕೆಲವೇ ದಿನಗಳ ಮುನ್ನ ಬ್ರಿಟನ್ ತನ್ನ ವೀಸಾ ನೀತಿಯನ್ನು ಬದಲಾವಣೆ ಮಾಡಿರುವುದು ಗಮನಾರ್ಹ ಅಂಶವಾಗಿದೆ. 
ಬ್ರಿಟನ್ ನ ವಲಸೆ ಸಲಹಾ ಸಮಿತಿ ಶಿಫಾರಸ್ಸನ್ನು ಆಧರಿಸಿ ಟೈರ್ -2 ವೀಸಾ ವಿಭಾಗಕ್ಕೆ 2016 ರ ಮಾರ್ಚ್ ನಲ್ಲಿ ಎರಡು ಹಂತದ ಬದಲಾವಣೆ ಮಾಡಲಾಗಿತ್ತು. ಈಗ ವೀಸಾ ನೀತಿಗಳನ್ನು ಮತ್ತಷ್ಟು ಬದಲಾವಣೆ ಮಾಡಲಾಗಿದ್ದು ನವೆಂಬರ್ 24 ರ ನಂತರ ಅರ್ಜಿ ಸಲ್ಲಿಸುವವರಿಗೆ ಇದು ಅನ್ವಯವಾಗಲಿದೆ ಎಂದು ಹೇಳಿದೆ. 
ಟೈರ್- 2 ಐಸಿಟಿ ವಿಭಾಗದ ವೀಸಾ ನಿಬಂಧನೆಗಳಲ್ಲಿ ಕನಿಷ್ಟ ವೇತನ ಪ್ರಮಾಣವನ್ನು ಹೆಚ್ಚಿಸಿರುವುದರೊಂದಿಗೆ ಟೈರ್ 2 ಸಾಮಾನ್ಯ ವಿಭಾಗದ ವೀಸಾದಲ್ಲಿಯೂ ವೇತನ ಮಿತಿಯನ್ನು 25,000 ಪೌಂಡ್ ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ಈ ವಿಭಾದಲ್ಲಿ ಕೆಲವು ವಿನಾಯಿತಿ ನೀಡಲಾಗಿದ್ದು ಟೈರ್ 2 ( ಐಸಿಟಿ) ಪದವಿ ತರಬೇತಿ ವೇತನ ಮಿತಿಯನ್ನು 23,000 ಪೌಂಡ್ ಗಳಿಗೆ ಇಳಿಕೆ ಮಾಡಿ, ವಾರ್ಷಿಕವಾಗಿ ಪ್ರತಿ ಕಂಪನಿಗೆ ನೀಡಲಾಗುವ ಸ್ಥಾನಗಳನ್ನು 20 ಕ್ಕೆ ಏರಿಕೆ ಮಾಡಲಾಗಿದೆ, ಇದೆ ವೇಳೆ ಟೈರ್ 2 (ಐಸಿಟಿ) ಕೌಶಲಗಳನ್ನು ವರ್ಗಾವಣೆ ಉಪವಿಭಾಗವನ್ನು ಮುಚ್ಚಲಾಗಿದೆ. 
ಡಾಕ್ಟರೇಟ್ ವಿಸ್ತರಣೆ ಯೋಜನೆ ನಿರ್ವಹಣೆ ಅಗತ್ಯಗಳನ್ನು ಒಳಗೊಂಡಂತೆ  ಟೈರ್-4 ವಿಭಾಗದ ವೀಸಾದಲ್ಲಿಯೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು 2 ವರೆ ವರ್ಷಗಳ ನಂತರ 5 ವರ್ಷಗಳು ಬ್ರಿಟನ್ ನಲ್ಲೆ ವಾಸಿಸಲು ಪಡೆಯುವ ವೀಸಾಗೆ ಇಂಗ್ಲಿಷ್ ಭಾಷೆ ಅಗತ್ಯತೆಗಳನ್ನು ವೀಸಾ ನೀತಿಯಲ್ಲಿ ಸೇರಿಸಲಾದ್ದು, ಭಾರತೀಯರು ಸೇರಿದಂತೆ ಬ್ರಿಟನ್ ನ ಹೊರಗಿನ ಪ್ರಜೆಗಳ ಮೇಲೆ ಪರಿಣಾಮ ಬೀರಲಿದೆ.  
ಇಂಗ್ಲಿಷ್ ಭಾಷೆಯ ಅಗತ್ಯತೆ ಬ್ರಿಟನ್ ಗೆ ಕುಟುಂಬ ಸಮೇತ ವಲಸೆ ಹೋಗುವ ನೌಕರರ ಪೋಷಕರು ಸಂಗಾತಿಗೂ ಅನ್ವಯವಾಗಲಿದೆ. ವಿದೇಶಿ ನೌಕರರ ಮೇಲೆ ಅವಲಂಬನೆ ಕಡಿಮೆಗೊಳಿಸಿ, ವಲಸೆ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಎಂಎಸಿ ಶಿಫಾರಸ್ಸುಗಳನ್ನು ಆಧರಿಸಿ ಬ್ರಿಟನ್  ವೀಸಾ ನೀತಿಗಳಲ್ಲಿ ಬದಲಾವಣೆ ತರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com