ಅಮೆರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ

ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 45ನೇ ಅಧ್ಯಕ್ಷರಾಗಿ 70 ವರ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 45ನೇ ಅಧ್ಯಕ್ಷರಾಗಿ 70 ವರ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಈ ಮೂಲಕ ಉದ್ಯಮಿಯೊಬ್ಬ ದೇಶವನ್ನು ಮುನ್ನಡೆಸಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು 276 ಸ್ಥಾನಗಳನ್ನು ಗೆದ್ದುಕೊಂಡರೆ ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ 218 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಅಮೆರಿಕಾ ಅಧ್ಯಕ್ಷರಾಗಲು 270 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಪ್ರಮುಖ ರಾಜ್ಯಗಳಲ್ಲಿ ಜಯ ಸಾಧಿಸಿದ್ದು ಟ್ರಂಪ್ ಗೆಲುವಿಗೆ ಕಾರಣವಾಯಿತು.ಟ್ರಂಪ್ ಅವರು 23 ರಾಜ್ಯಗಳಲ್ಲಿ ಮತ್ತು ಹಿಲರಿಯವರು 13 ರಾಜ್ಯಗಳಲ್ಲಿ ಜಯ ಸಾಧಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ವ್ಯವಸ್ಥಾಪಕ ಕೆಲ್ಲಿನ್ನೆ ಕೊನ್ವೆ ಮಾತನಾಡಿ, ಟ್ರಂಪ್ ಟವರ್ ನೊಳಗಿನ ಮನಸ್ಥಿತಿ ತುಂಬಾ ಉತ್ಸಾಹದಿಂದ ಕೂಡಿದೆ. ಟ್ರಂಪ್ ಅವರ ಗೆಲುವು ಅವರ ಪ್ರತಿಸ್ಫರ್ಧಿ ಹಿಲರಿ ಕ್ಲಿಂಟನ್ ಅವರಿಗೆ ಅತೀವ ದುಃಖವನ್ನುಂಟುಮಾಡಲಿದೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಸಾವಿರಾರು ಅಭಿಮಾನಿಗಳು ಮ್ಯಾನ್ ಹಟ್ಟನ್ ಹೊಟೇಲ್ ನ ಮಧ್ಯ ಪ್ರಾಂಗಣದಲ್ಲಿ ಸೇರಿದ್ದು ಗೆಲುವಿನ ಸಂಭ್ರಮಾಚರಣೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com