ಸಾಂದರ್ಭಿಕ ಚಿತ್ರ
ವಿದೇಶ
ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; ಆರು ಜನ ಸಾವು
ಕಾಬುಲ್ ನಲ್ಲಿ ಬುಧವಾರ ಸರ್ಕಾರಿ ವಾಹನವೊಂದಕ್ಕೆ ಹೊಕ್ಕಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ ಆರು ಜನ ಮೃತಪಟ್ಟು ೧೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು
ಅಫ್ಘಾನಿಸ್ಥಾನ್: ಕಾಬುಲ್ ನಲ್ಲಿ ಬುಧವಾರ ಸರ್ಕಾರಿ ವಾಹನವೊಂದಕ್ಕೆ ಹೊಕ್ಕಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ ಆರು ಜನ ಮೃತಪಟ್ಟು ೧೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆ ಹೊತ್ತಿದೆ.
ಉಗ್ರಗಾಮಿಗಳು ದೇಶದಾದ್ಯಂತ ದಾಳಿಗಳನ್ನು ತೀವ್ರಗೊಳಿಸಿದ್ದು, ಈ ದಾಳಿ ಮುಂಜಾನೆಯಲ್ಲಿ ನಡೆದಿದೆ. "ಕಾಬುಲ್ ನಲ್ಲಿ ಭದ್ರತಾ ಪಡೆಗಳಿಗೆ ಸೇರಿದ ವಾಹನವನ್ನು ಭಯೋತ್ಪಾದಕ ದಾಳಿಯಾಗಿಸಿದ್ದ" ಎಂದು ಆಂತರಿಕ ಸಚಿವಾಲಯದ ವಕ್ತಾರ ಸೇದಿಕ್ ಸೆದ್ದಿಖಿ ಹೇಳಿದ್ದಾರೆ.
ಭದ್ರತಾ ಸಚಿವಾಲಯದ ಬಳಿ ನಡೆದ ಈ ದಾಳಿಯಲ್ಲಿ ಐದು ನಾಗರಿಕರು ಮತ್ತು ಸೇನಾಧಿಕಾರಿ ಸೇರಿದಂತೆ ಆರು ಜನ ಮೃತಪಟ್ಟಿದ್ದು, ೧೦ ಜನ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಕಳೆದ ಶನಿವಾರವಷ್ಟೇ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ನಾಲ್ವರು ಅಮೆರಿಕನ್ನರು ಮೃತಪಟ್ಟಿದ್ದರು. ಇದು ಅಮೆರಿಕಾ ಸೇನಾ ನೆಲೆಯ ಬಳಿ ನಡೆದ ಘಟನೆಯಾಗಿತ್ತು. ಇದಕ್ಕೆ ತಾಲಿಬಾನ್ ಹೊಣೆ ಹೊತ್ತಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ