ತಾಲಿಬಾನ್ ಉಗ್ರರು (ಸಂಗ್ರಹ ಚಿತ್ರ)
ವಿದೇಶ
ತಾಲಿಬಾನ್ ನ ಒಂದು ಡಜನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಭದ್ರತಾ ಪಡೆ
ಅಫ್ಘಾನಿಸ್ತಾನ ಭದ್ರತಾ ಪಡೆ ತಾಲೀಬಾನ್ ಉಗ್ರ ಸಂಘಟನೆಯ 12 ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಹೇಳಿದೆ.
ಕಾಬುಲ್: ಅಫ್ಘಾನಿಸ್ತಾನ ಭದ್ರತಾ ಪಡೆ ತಾಲೀಬಾನ್ ಉಗ್ರ ಸಂಘಟನೆಯ 12 ಉಗ್ರರನ್ನು ಹತ್ಯೆ ಮಾಡಿದೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಹೇಳಿದೆ.
ಕಳೆದ 24 ಗಂಟೆಗಳಿಂದ ಭಯೋತ್ಪಾದಕರ ವಿರುದ್ಧ ಅಫ್ಘಾನಿಸ್ತಾನ ಸೇನೆ, ಪೊಲೀಸರು ಹಾಗೂ ಗುಪ್ತಚರ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 12 ಉಗ್ರರನ್ನು ಹತ್ಯೆಯಾಗಿದ್ದು 23 ಉಗ್ರರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
34 ಪ್ರಾಂತ್ಯಗಳ ಪೈಕಿ 11 ಪ್ರಾಂತ್ಯಗಳಲ್ಲಿ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ದಕ್ಷಿಣದ ಹೆಲ್ಮಂಡ್ ಪ್ರಾಂತ್ಯದ ಲಷ್ಕರ್ ಘಾ ನಗರದಲ್ಲಿ 8 ಉಗ್ರರನ್ನು ಹತ್ಯೆ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ