ಡೊನಾಲ್ಡ್ ಟ್ರಂಪ್
ವಿದೇಶ
ಮತ ಮರುಎಣಿಕೆಯಿಂದ ಯಾವುದೇ ಬದಲಾವಣೆಯಾಗುವುದಿಲ್ಲ: ಡೊನಾಲ್ಡ್ ಟ್ರಂಪ್
ಮತಗಳ ಮರು ಎಣಿಕೆ ನಡೆಯುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷರಾಗಿ ನಿಯೋಜಿತರಾಗಿರುವ ...
ವಾಷಿಂಗ್ಟನ್: ಮತಗಳ ಮರು ಎಣಿಕೆ ನಡೆಯುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನವೆಂಬರ್ 8 ರಂದು ನಡೆದ ಅಮೆರಿಕಾ ಅಧ್ಯಕ್ಷ ಹುದ್ದೆಗೆ ನಡೆದ ಮತದಾನವನ್ನು ಮರು ಎಣಿಕೆ ಮಾಡಬೇಕೆಂದು ಗ್ರೀನ್ ಪಾರ್ಟಿ ಅಧ್ಯಕ್ಷ ಜಿಲ್ ಸ್ಟಿಯಾನೇ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್, ವೈಟ್ ಹೌಸ್ ಗಾಗಿ ಈ ಎಲ್ಲಾ ಪಿತೂರಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.ಫಲಿತಾಂಶದ ನಂತರ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ನನ್ನ ಜೊತೆ ಫೋನಿನಲ್ಲಿ ಸಂಭಾಷಣೆ ನಡೆಸಿದರು. ಮುಂದಿನ ಭವಿಷ್ಯಕ್ಕಾಗಿ ಈ ಫಲಿತಾಂಶವನ್ನ ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅದೇ ಫಲಿತಾಂಶಕ್ಕಾಗಿ ಅಧಿಕ ಹಣ ಮತ್ತು ಸಮಯವನ್ನು ಮತ್ತೆ ವ್ಯಯಿಸಬೇಕಾಗುತ್ತದೆ. ಎಂದು ಟ್ರಂಪ್ ಬೇಸರದಿಂದ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ