ಕಮ್ಯೂನಿಸ್ಟ್ ನಾಯಕ ಕ್ಯಾಸ್ಟ್ರೊಗೆ ಅಂತಿಮ ನಮನ ಸಲ್ಲಿಸಲು ಹವಾನಾಕ್ಕೆ ತೆರಳಿದ ರಾಜನಾಥ್ ಸಿಂಗ್

ಕ್ಯೂಬಾ ಮಾಜಿ ಅಧ್ಯಕ್ಷ ಮತ್ತು ಕ್ರಾಂತಿಕಾರಿ ನಾಯಕ ಫಿಡಲ್ ಕ್ಯಾಸ್ಟ್ರೋ ಅವರಿಗೆ ಅಂತಿಮ ನಮನ...
ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)
ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)
ನವದೆಹಲಿ: ಕ್ಯೂಬಾ ಮಾಜಿ ಅಧ್ಯಕ್ಷ ಮತ್ತು ಕ್ರಾಂತಿಕಾರಿ ನಾಯಕ ಫಿಡಲ್ ಕ್ಯಾಸ್ಟ್ರೋ ಅವರಿಗೆ ಅಂತಿಮ ನಮನ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಬೆಳಗ್ಗೆ ಕ್ಯೂಬಾ ರಾಜಧಾನಿ ಹವಾನಾಗೆ ಹೊರಟಿದ್ದಾರೆ.
ಹವಾನಾ ನಗರದ ರೆವ್ಯೊಲ್ಯೂಷನ್ ಸ್ಕ್ವೇರ್ ನಲ್ಲಿ ನಡೆಯಲಿರುವ ಸಾಮೂಹಿಕ ಸ್ಮರಣ ಕ್ರಿಯೆ ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಗೃಹ ಸಚಿವರ ಜೊತೆಗೆ ಭಾರತದ ನಿಯೋಗವೊಂದು ಹೊರಟಿದೆ.
ವಾರಪೂರ್ತಿ ನಡೆಯಲಿರುವ ಸಾಮೂಹಿಕ ಸ್ಮರಣ ಕಾರ್ಯಕ್ರಮ ನಿನ್ನೆ ಆರಂಭವಾಗಿದ್ದು ಸಾವಿರಾರು ಮಂದಿ ನಿತ್ಯವೂ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಫಿಡಲ್ ಕ್ಯಾಸ್ಟ್ರೋ ಅವರು 1953ರಲ್ಲಿ ತಮ್ಮ ಕ್ರಾಂತಿಯನ್ನು ಆರಂಭಿಸಿದ ಸಂತಿಯಗೊ ಡಿ ಕ್ಯೂಬಾದ ಆಗ್ನೇಯ ಭಾಗದಲ್ಲಿ ಸಾಮೂಹಿಕ ಅಂತಿಮ ನಮನ ಕಾರ್ಯಕ್ರಮದ ಆರಂಭದಲ್ಲಿ ನಿನ್ನೆ ಗೌರವ ಶ್ರದ್ಧಾಂಜಲಿಯಾಗಿ ಸರ್ಕಾರದ ವತಿಯಿಂದ 21 ಸುತ್ತುಗಳ ತುಫಾಕಿಗಳನ್ನು ಸಿಡಿಸಲಾಯಿತು. ನಾಡಿದ್ದು ಭಾನುವಾರ ಶ್ರದ್ಧಾಂಜಲಿ ಕೊನೆಯಾಗಲಿದ್ದು ನಂತರ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.
1959ರಲ್ಲಿ ಕ್ಯೂಬಾದಲ್ಲಿ ಕ್ರಾಂತಿಯನ್ನು ಸಾರಿದ್ದ ಕಮ್ಯೂನಿಸ್ಟ್ ನಾಯಕ ಫಿಡಲ್ ಕ್ಯಾಸ್ಟ್ರೊ 50 ದಶಕಗಳ ಕಾಲ ಕೆರಿಬಿಯನ್ ದ್ವೀಪವನ್ನು ಆಳಿದ್ದರು. ಕಳೆದ 10 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ತಮ್ಮ ಸೋದರ ರೌವುಲ್ ಕ್ಯಾಸ್ಟ್ರೊ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಅವರು ಮೊನ್ನೆ ಶನಿವಾರ ಸಮಾಧಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com