ಪಾಕ್ ಗೆ ಉಗ್ರ ರಾಷ್ಟ್ರ ಪಟ್ಟ ಕಟ್ಟಲು ಆಗ್ರಹಿಸಿರುವ ಆನ್ ಲೈನ್ ಅರ್ಜಿಗೆ ಬ್ರಿಟನ್ ನಲ್ಲೂ ದಾಖಲೆಯ ಸಹಿ!

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನ ನಡೆಸಿದ್ದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಸಿಕ್ಕಿದ್ದ ಬೆನ್ನಲ್ಲೇ, ಬ್ರಿಟನ್ ನಲ್ಲೂ ಭಾರಿ ಬೆಂಬಲ ವ್ಯಕ್ತವಾಗಿದೆ.
ಪಾಕ್ ಗೆ ಉಗ್ರ ರಾಷ್ಟ್ರ ಪಟ್ಟ ಕಟ್ಟಲು ಆಗ್ರಹಿಸಿರುವ ಆನ್ ಲೈನ್ ಅರ್ಜಿಗೆ ಬ್ರಿಟನ್ ನಲ್ಲೂ ದಾಖಲೆಯ ಸಹಿ!
ಪಾಕ್ ಗೆ ಉಗ್ರ ರಾಷ್ಟ್ರ ಪಟ್ಟ ಕಟ್ಟಲು ಆಗ್ರಹಿಸಿರುವ ಆನ್ ಲೈನ್ ಅರ್ಜಿಗೆ ಬ್ರಿಟನ್ ನಲ್ಲೂ ದಾಖಲೆಯ ಸಹಿ!

ಲಂಡನ್: ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನ ನಡೆಸಿದ್ದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಸಿಕ್ಕಿದ್ದ ಬೆನ್ನಲ್ಲೇ, ಬ್ರಿಟನ್ ನಲ್ಲೂ ಭಾರಿ ಬೆಂಬಲ ವ್ಯಕ್ತವಾಗಿದೆ.

ಶ್ವೇತ ಭವನಕ್ಕೆ ಸಂಬಂಧಿಸಿದ್ದ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿ ಪ್ರಾರಂಭಿಸಿದ್ದ ರೀತಿಯಲ್ಲೇ, ಬ್ರಿಟನ್ ಸಂಸತ್ ಗೆ ಸಂಬಂಧಿಸಿದ ವೆಬ್ ಸೈಟ್ ನಲ್ಲಿಯೂ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಆನ್ ಲೈನ್ ಅರ್ಜಿಯನ್ನು ಪ್ರಾರಂಭಿಸಲಾಗಿತ್ತು. ಅಮೆರಿಕದಂತೆ ಬ್ರಿಟನ್ ನಲ್ಲೂ ಪಾಕ್ ವಿರುದ್ಧದ ಅರ್ಜಿಗೆ ಭರಪೂರ ಬೆಂಬಲ ವ್ಯಕ್ತವಾಗಿದ್ದು. ಅಕ್ಟೊಬರ್ 1 ಒಂದೇ ದಿನದಲ್ಲಿ 10,000 ಸಹಿಗಳನ್ನು ಪಡೆದಿದೆ.

ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದನ್ನು ಬ್ರಿಟನ್ ಖಂಡಿಸುತ್ತದೆ ಎಂಬ ಶೀರ್ಷಿಕೆಯಡಿ ಆನ್ ಲೈನ್ ಅರ್ಜಿಯನ್ನು ಬ್ರಿಟನ್ ಸಂಸತ್ ಗೆ ಸಂಬಂಧಿಸಿದ ವೆಬ್ ಸೈಟ್ ಪ್ರಕಟಿಸಿದ್ದು, ನಿರೀಕ್ಷಿತ ಸಂಖ್ಯೆಯಲ್ಲಿ ಸಹಿ ಸಂಗ್ರವಾದರೆ ಬ್ರಿಟನ್ ಸರ್ಕಾರ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವುದರ ಬಗ್ಗೆ ನಿರ್ಧಾರ ಪ್ರಕಟಿಸಬೇಕಾಗುತ್ತದೆ.

ಆನ್ ಲೈನ್ ಅರ್ಜಿಗೆ ಸಹಿ ಹಾಕುವುದಕ್ಕೆ 2017ರ ಮಾರ್ಚ್ 29 ರ ವರೆಗೆ ಗಡುವು ವಿಧಿಸಲಾಗಿದ್ದು, 100,000 ಸಹಿ ಸಂಗ್ರಹವಾಗುವ ನಿರೀಕ್ಷೆ ಇದೆ. ಸೆ.21 ರಂದು ಶ್ವೇತ ಭವನದಿಂದ ಪ್ರಾರಂಭವಾಗಿದ್ದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಕೇವಲ ಆರು ದಿನಗಳಲ್ಲಿ 1 ಲಕ್ಷ ಜನರು ಸಹಿ ಹಾಕಿದ್ದು ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಅಮೆರಿಕ ಕಾಂಗ್ರೆಸ್ ನಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರಾಗಿರುವ ಟೆಡ್ ಪೋ ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಪ್ರವರ್ತಿಸುವ ದೇಶವೆಂದು ಪರಿಗಣಿಸುವ ಮಸೂದೆಯನ್ನು ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com