ಜಪಾನ್ ವಿಜ್ಞಾನಿ ಯೋಶಿನೋರಿಗೆ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ

2016ನೇ ಸಾಲಿನ ನೊಬೆಲ್ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಜಪಾನಿನ ಯೋಶಿನೋರಿ ಒಸುಮಿ ಅವರು ವೈದ್ಯಕೀಯ ವಿಭಾಗದ...
ಯೋಶನೋರಿ ಒಸುಮಿ
ಯೋಶನೋರಿ ಒಸುಮಿ
ನವದೆಹಲಿ: 2016ನೇ ಸಾಲಿನ ನೊಬೆಲ್ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಜಪಾನಿನ ಯೋಶಿನೋರಿ ಒಸುಮಿ ಅವರು ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಯೋಶಿನೋರಿ ಅವರಿಗೆ ದೇಹ ರಚನಾ ಪದಾರ್ಥಗಳು ಜೀರ್ಣಿಸುವ ಪ್ರಕ್ರಿಯೆ(ಆಟೋಫಗಿ) ಕುರಿತಾಗಿ ನಡೆಸಲಾಗಿರುವ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ಲಬಿಸಿದೆ.
ಆಟೋಫಗಿ ಪದದ ನೇರ ಅರ್ಥ ಸ್ವಯಂಭಕ್ಷಣಯಾಗಿದ್ದು, ಜೀವಕೋಶಗಳು ತಮ್ಮಲ್ಲಿನ ಅಂಶಗಳನ್ನು ಮರುಬಳಕೆ ಮಾಡುವ ಪ್ರಕ್ರಿಯೆ ಇದಾಗಿದೆ. ಕೋಶ ಒಳಗಿನ ಪದಾರ್ಥಗಳನ್ನು ಪದರದೊಳಗೆ ಸೇರಿಸಿ, ಅದನ್ನು ಕೋಶದೊಳಗಿನ ಮರುಬಳಕೆ ಕೇಂದ್ರಕ್ಕೆ ರವಾನಿಸುತ್ತದೆ ಎಂಬುದನ್ನು 1960ರಲ್ಲಿಯೇ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ರೀತಿಯ ಆಟೋಫಗಿ ಪ್ರಕ್ರಿಯೆ ನಿಯಂತ್ರಿಸಲು ಕಾರಣವಾಗಿರುವ ವಂಶವಾಹಿಗಳ ವರ್ಗವನ್ನು ವಿಜ್ಞಾನಿ ಯೋಶಿನೋರಿ ಪತ್ತೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com