ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ.ಜನರಲ್ ರಿಜ್ವಾನ್ ಅಖ್ತರ್ ಅವರನ್ನು ಕೆಲವೇ ವಾರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಶನಿವಾರ ಮಾಧ್ಯಮ ವರದಿ ತಿಳಿಸಿದೆ.
ರಿಜ್ವಾನ್ ಅಖ್ತರ್ ಅವರನ್ನು 2014ರ ಸೆಪ್ಟೆಂಬರ್ ನಲ್ಲಿ ಮೂರು ವರ್ಷದ ಅವಧಿಗೆ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್ಐ)ನ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದ್ದು, ಇದೀಗ ಅವಧಿಗೆ ಮುಂಚೆಯೇ ಅವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಿಜ್ವಾನ್ ಅಖ್ತರ್ ಅವರ ಸ್ಥಾನಕ್ಕೆ ಕರಾಚಿ ಸೇನಾ ಕಮಾಂಡರ್ ಲೆ.ಜನರಲ್ ನವೀದ್ ಮುಖ್ತರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಮಾಡಲಾಗಿದೆ.
ಅಖ್ತರ್ ಅವರು ನೇಮಕವಾಗಿ ಕೇವಲ 2 ವರ್ಷಗಳಾಗಿದೆ. ಅವರು ಅವಧಿಗೂ ಮುನ್ನವೇ ಅಧಿಕಾರದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಆದರೆ ಐಎಸ್ಐ ಮುಖ್ಯಸ್ಥರನ್ನು ಬದಲಾಯಿಸಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪಾಕ್ ಮಾಧ್ಯಮ ತನ್ನ ವರದಿಯಲ್ಲಿ ತಿಳಿಸಿದೆ.