ಬರೋಬ್ಬರೀ 60 ಕೋಟಿ ನೀಡಿ ಸಿಂಗಲ್ ಡಿಜಿಟ್ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ!

ದುಬೈನಲ್ಲಿರುವ ಭಾರತೀಯ ಮೂಲದ ಉದ್ಯಮಿಯೊಬ್ಬ ಬರೋಬ್ಬರಿ 60 ಕೋಟಿ ರು ನೀಡಿ ಸಿಂಗಲ್ ಡಿಜಿಟ್ ನಂಬರ್ ಪ್ಲೇಟ್ ಖರೀದಿಸಿದ್ದಾರೆ. ..,
ನಂಬರ್ ಪ್ಲೇಟ್ ನೊಂದಿಗೆ ಉದ್ಯಮಿ
ನಂಬರ್ ಪ್ಲೇಟ್ ನೊಂದಿಗೆ ಉದ್ಯಮಿ

ದುಬೈ: ದುಬೈನಲ್ಲಿರುವ ಭಾರತೀಯ ಮೂಲದ ಉದ್ಯಮಿಯೊಬ್ಬ ಬರೋಬ್ಬರಿ 60 ಕೋಟಿ ರು ನೀಡಿ ಸಿಂಗಲ್ ಡಿಜಿಟ್ ನಂಬರ್ ಪ್ಲೇಟ್ ಖರೀದಿಸಿದ್ದಾರೆ.

ದುಬೈನಲ್ಲಿ ಉದ್ಯಮ ನಡೆಸುತ್ತಿರುವ ಭಾರತೀಯ ಮೂಲದ ಬಲವಿಂದರ್ ಸಹಾನಿ ಎಂಬುವವರು 60 ಕೋಟಿ ರೂ. ವೆಚ್ಚ ಮಾಡಿ ‘ಡಿ 5’  ನಂಬರ್ ಪ್ಲೇಟ್ ಖರೀದಿಸಿದ್ದಾರೆ!

ಅಲ್ಲಿನ ಸರ್ಕಾರ ಏರ್ಪಡಿಸಿದ್ದ ಹರಾಜಿನಲ್ಲಿ ಬಲವಿಂದರ್ ಸಹಾನಿ, ತಮ್ಮ ರೊಲ್ಸ್ ರಾಯ್ಸ್ ಕಾರಿಗಾಗಿ ಈ ಸಂಖ್ಯೆ ಯನ್ನು 60 ಕೋಟಿ ರೂ. ಬಿಡ್ ಮಾಡಿ ಕೊಂಡುಕೊಂಡಿದ್ದಾರೆ. ಸಹಾನಿ ದುಬೈನಲ್ಲಿ ಪ್ರಾಪರ್ಟಿ ಮ್ಯಾನೇಜ್​ವೆುಂಟ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ.

ಕಳೆದ ವರ್ಷ ಅವರು 45 ಕೋಟಿ ರೂ.ಗಳನ್ನು ನೀಡಿ 09 ಎಂಬ ಸಂಖ್ಯೆಯನ್ನು ಖರೀದಿಸಿ ದ್ದರು. ಚಿಕ್ಕ ಸಂಖ್ಯೆಯ ನೋಂದಣಿ ಹೊಂದಿದ ವಾಹನಗಳಿದ್ದರೆ ಅದು ಶ್ರೀಮಂತಿಕೆ ಬಿಂಬಿಸುತ್ತದೆ ಎಂದು ದುಬೈನಲ್ಲಿ ಹೇಳಲಾಗುತ್ತದೆ. 2008ರಲ್ಲಿ ದುಬೈನ ಉದ್ಯಮಿ ಸಹೀದ್ ಅಲ್ ಕೌರಿ 1 ಸಂಖ್ಯೆಯ ನೋಂದಣಿಗೆ 94 ಕೋಟಿ ರೂ. ನೀಡಿದ್ದರು.

ಈ ಹರಾಜಿನಲ್ಲಿ ಇನ್ನೂ ಕೆಲವು ನಂಬರ್ ಪ್ಲೇಟ್‍ಗಳು ಭಾರೀ ಮೊತ್ತಕ್ಕೆ ಹರಾಜಾದವು. ಕ್ಯೂ77 ನಂಬರ್‍ಪ್ಲೇಟ್ 45.2 ದಿರ್ಹಮ್(ಅಂದಾಜು 8.2 ಕೋಟಿ ರೂ)ಗೆ ಹರಾಜಾಗಿದೆ. ಪಿ27 ನಂಬರ್‍ಪ್ಲೇಟ್ 21 ಲಕ್ಷ ದಿರ್ಹನ್(ಅಂದಾಜು 3.8 ಕೋಟಿ ರೂ) ಹಾಗೂ ಆರ್777 ನಂಬರ್‍ಪ್ಲೇಟ್ 11.7 ಲಕ್ಷ ದಿರ್ಹನ್(ಅಂದಾಜು 2.12 ಕೋಟಿ ರೂ.) ಗೆ ಹರಾಜಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com