

ಬೊಗೋಟಾ: ನೊಬೆಲ್ ಶಾಂತಿ ಪ್ರಶಸ್ತಿಯಿಂದ ಬಂದ ಹಣವನ್ನು ದೇಶಕ್ಕಾಗಿ ಹೋರಾಟ ನಡೆಸಿದ ಸಂತ್ರಸ್ತರಿಗೆ ನೀಡಲು ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯೆಲ್ ಸ್ಯಾಂಟೋಸ್ ನಿರ್ಧರಿಸಿದ್ದಾರೆ.
ತಮ್ಮ ಕುಟುಂಬಸ್ಥರನ್ನು ಭೇಟಿ ಚರ್ಚೆ ನಡೆಸಿದೆ. ನನಗೆ ನೊಬೆಲ್ ಪ್ರಶಸ್ತಿಯಿಂದ ಬಂದಿರುವ 8 ಮಿಲಿಯನ್ ಸ್ವಿಡೀಸ್ ಕ್ರೋನಾ ಹಣವನ್ನು ದೇಶಕ್ಕಾಗಿ 53 ವರ್ಷ ಹೋರಾಟ ನಡೆಸಿದ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯೆಲ್ ಸ್ಯಾಂಟೋಸ್ ಅವರು ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾಗಿಗ್ದಾರೆ. ಅರ್ಧ ಶತಮಾನದ ಯುದ್ಧವನ್ನು ಕೊನೆಗೊಳಿಸಿದ ಕೊಲಂಬಿಯಾ ಶಾಂತಿ ಒಪ್ಪಂದದ ಸಾಧನೆಗಾಗಿ ಸ್ಯಾಂಟೋಸ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಸುಮಾರು ಎರಡೂವರೆ ಲಕ್ಷ ಜನರನ್ನು ಬಲಿ ತೆಗೆದುಕೊಂಡ ಐದು ದಶಕಗಳ ಸಮರಕ್ಕೆ ಮಂಗಳ ಹಾಡುವ ಕೊಲಂಬಿಯಾ ಶಾಂತಿ ಒಪ್ಪಂದಕ್ಕೆ ಸೆಪ್ಟೆಂಬರ್ 26ರಂದು ಅಧ್ಯಕ್ಷ ಸ್ಯಾಂಟೋಸ್ ಮತ್ತು ಮಾರ್ಕ್ಸ್ವಾದಿ ಫಾರ್ಕ್ ಬಂಡಾಯ ನಾಯಕ ಟಿಮೊಚೆಂಕೊ ಸಹಿ ಮಾಡಿದ್ದರು.
Advertisement