ಪ್ಯಾರಿಸ್ ಭಯೋತ್ಪಾದಕ ದಾಳಿ ಶಂಕಿತ ಸಾಲಾಹ್ ಅಬ್ಡೆಸ್ಲಾಂ
ವಿದೇಶ
ಪ್ಯಾರಿಸ್ ಭಯೋತ್ಪಾದಕ ದಾಳಿ ಶಂಕಿತನ ಪರ ವಾದ ಮಾಡಲು ವಕೀಲರ ನಕಾರ
ನವೆಂಬರ್ 2015 ರ ಪ್ಯಾರಿಸ್ ಭಯೋತ್ಪಾದನಾ ದಾಳಿಯಲ್ಲಿ ಬದುಕುಳಿದಿರುವ ಒಬ್ಬನೇ ಶಂಕಿತ ಉಗ್ರನ ಪರವಾಗಿ ಇನ್ನು ಮುಂದೆ ವಾದ ಮಾಡುವುದಿಲ್ಲ ಎಂದು ವಕೀಲರು
ಪ್ಯಾರಿಸ್: ನವೆಂಬರ್ 2015 ರ ಪ್ಯಾರಿಸ್ ಭಯೋತ್ಪಾದನಾ ದಾಳಿಯಲ್ಲಿ ಬದುಕುಳಿದಿರುವ ಒಬ್ಬನೇ ಶಂಕಿತ ಉಗ್ರನ ಪರವಾಗಿ ಇನ್ನು ಮುಂದೆ ವಾದ ಮಾಡುವುದಿಲ್ಲ ಎಂದು ವಕೀಲರು ಹೇಳಿದ್ದಾರೆ.
ಶಂಕಿತ ಭಯೋತ್ಪಾದಕ ಸಾಲಾಹ್ ಅಬ್ಡೆಸ್ಲಾಂ ಮೌನವಾಗುಳಿಯುವ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ವಕೀಲ ಫ್ರಾಂಕ್ ಬೆರ್ಟನ್ ಟಿವಿ ವಾಹಿನಿಯೊಂದಕ್ಕೆ ಬುಧವಾರ ಹೇಳಿದ್ದಾರೆ.
"ನಾವು ಮೊದಲಿನಿಂದಲೂ ಅದನ್ನೇ ಹೇಳುತ್ತಾ ಬಂದಿದ್ದೇವೆ... ನಮ್ಮ ಕಕ್ಷಿದಾರ ಮೌನವಾಗಿ ಉಳಿಯಲಿದ್ದಾನೆ ಮತ್ತು ನಾವು ವಾದ ಮಾಡುವುದರಿಂದ ಹಿಂದೆ ಸರಿಯಲಿದ್ದೇವೆ" ಎಂದು ಬೆರ್ಟನ್ ಮತ್ತು ಸಹ ವಕೀಲ ಸ್ವೆನ್ ಮೇರಿ ಹೇಳಿದ್ದಾರೆ.
ಅಕ್ಟೋಬರ್ 6 ರಂದು ಭಯೋತ್ಪಾದನಾ ವಿರೋಧಿ ನ್ಯಾಯಾಧೀಶರ ಮುಂದೆ ಎರಡನೇ ಬಾರಿಗೆ ಹಾಜರಾಗಿದ್ದ ಹಾಜರಾದ ಅಬ್ಡೆಸ್ಲಾಂ, ಭಯೋತ್ಪಾದನಾ ದಾಳಿಯಲ್ಲಿ ತಮ್ಮ ಪಾತ್ರದ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿರುವ ಅವಕಾಶವನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಬಿಬಿಸಿ ವರದಿ ಮಾಡಿತ್ತು.
ಮೇ ನಲ್ಲಿ ಮೊದಲ ವಿಚಾರಣೆಗೆ ಹಾಜರಾಗಿದ್ದಾಗಲೂ, ಫ್ರಾನ್ಸ್ ದೇಶದ ಭಯಾನಕ ಭಯೋತ್ಪಾದಕ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ.
ಪ್ಯಾರಿಸ್ ನ ಬಾರ್ ಗಳು, ಹೋಟೆಲ್ ಗಳು, ಸಂಗೀತ ಕಾರ್ಯಕರ್ಮಗಳ ಮೇಲೆ ನಡೆದಿದ್ದ ಹಲವು ದಾಳಿಗಳಲ್ಲಿ 130 ಕ್ಕೂ ಹೆಚ್ಚು ಜನ ಹತ್ಯೆಯಾಗಿದರು. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು.
ಮಾರ್ಚ್ ನಲ್ಲಿ ಬೆಲ್ಜಿಯಂ ನ ಬ್ರಸ್ಸಲ್ಸ್ ನಲ್ಲಿ ಅಬ್ಡೆಸ್ಲಾಂನನ್ನ ಬಂಧಿಸಲಾಗಿತ್ತು ಮತ್ತು ಅವನನ್ನು ಪ್ರತ್ಯೇಕವಾಗಿ ಜೈಲಿನಲ್ಲಿ ಇಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ