ಉತ್ತರಕೊರಿಯಾ ಕ್ಷಿಪಣಿ ವಿಫಲ ಪರೀಕ್ಷೆಯನ್ನು ಖಂಡಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ

ವಿಫಲವಾದ ಉತ್ತರಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಖಂಡಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇದು ಮತ್ತೆ ಉದ್ವಿಘ್ನತೆಗೆ ಎಡೆಮಾಡಿಕೊಟ್ಟಿದೆ ಎಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಯುನೈಟೆಡ್ ನೇಶನ್ಸ್: ವಿಫಲವಾದ ಉತ್ತರಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನು ಖಂಡಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇದು ಮತ್ತೆ ಉದ್ವಿಘ್ನತೆಗೆ ಎಡೆಮಾಡಿಕೊಟ್ಟಿದೆ ಎಂದಿದೆ.
ಶನಿವಾರ ಉತ್ತರ ಕೊರಿಯಾ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ವಿಫಲವಾಗಿರುವುದನ್ನು ಅಮೆರಿಕಾ ಮಿಲಿಟರಿ ಕಂಡುಹಿಡಿದಿತ್ತು. 
"ಇತ್ತ ಉತ್ತರ ಕೊರಿಯಾದ ನಾಗರಿಕರ ಎಷ್ಟೋ ಆಕಾಂಕ್ಷೆಗಳು ಈಡೇರದೆ ಉಳಿದಿದ್ದರು, ಡೆಮಾಕ್ರಟಿಕ್ ಪೀಪಲ್ಸ್ ರಿಪಬಲಿಕ್ ಆಫ್ ಕೊರಿಯಾ ತನ್ನ ಸಂಪನ್ಮೂಲಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯತ್ತ ಹರಿಸಿದೆ ಎಂಬ ವಿಷಯದ ಬಗ್ಗೆ ಭದ್ರತಾ ಮಂಡಳಿಯ ಸದಸ್ಯರು ವಿಷಾದ ವ್ಯಕ್ತಪಡಿಸುತ್ತಿದ್ದೇವೆ" ಎಂದು 15 ಸದಸ್ಯರ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. 
ಇದಕ್ಕೆ ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕೂಡ ಮಂಡಳಿ ಒಪ್ಪಿಕೊಂಡಿದೆ. 
ಕ್ಷಿಪಣಿ ಮತ್ತು ಅಣು ಶಸ್ತ್ರಾಸ್ತ್ರ ಪರೀಕ್ಷೆಯಿಂದಾಗಿ ಈಗಾಗಲೇ ಪಿಯೊಂಗಾಂಗ್ ಅಂತಾರಾಷ್ಟ್ರೀಯ ಒತ್ತಡ ಮತ್ತು ನಿಷೇಧವನ್ನು ಎದುರಿಸುತ್ತಿದೆ. ಸೆಪ್ಟೆಂಬರ್ 9 ರಂದು ಉತ್ತರ ಕೊರಿಯಾ ಐದನೇ ಅಣುಪರೀಕ್ಷೆಯನ್ನು ನಡೆಸಿತ್ತು. ಇದಕ್ಕಾಗಿ ಪಿಯೊಂಗಾಂಗ್ ಗೆ ಶಿಕ್ಷೆ ನೀಡಲು ಹೊಸ ನಿರ್ಧಾರಕ್ಕೆ ಬರಬೇಕೆಂದು ಭದ್ರತಾ ಮಂಡಳಿಯ ಸದಸ್ಯರಾದ ಅಮೆಲಿಕಾ ಮತ್ತು ಚೈನಾ ಒತ್ತಡ ಹೇರಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com