ರೈಲು ಅವಘಡದ ದೃಶ್ಯ
ವಿದೇಶ
ಕ್ಯಾಮರೂನ್ ರೈಲು ದುರಂತ: 70 ಸಾವು, 300ಕ್ಕೂ ಹೆಚ್ಚು ಗಾಯ
ಪ್ರಯಾಣಿಕರ ರೈಲೊಂದು ಹಳಿ ತಪ್ಪಿದ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು 300 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಸಾರಿಗೆ ಸಚಿವರು...
ಕ್ಯಾಮರೂನ್: ಪ್ರಯಾಣಿಕರ ರೈಲೊಂದು ಹಳಿ ತಪ್ಪಿದ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು 300 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.
ಕ್ಯಾಮರೂನ್ ನ ದೊಡ್ಡ ನಗರಗಳಾದ ಯೋನಡೇ ಹಾಗೂ ದೌಲಾಲ್ ನಡುವೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರೈಲು ಎಸೆಕಾ ಬಳಿ ಹಳಿ ತಪ್ಪಿ ಪಲ್ಟಿಯಾಗಿದೆ.
1300 ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ರೈಲಿನಲ್ಲಿ 600 ಮಂದಿ ಮಾತ್ರ ಪ್ರಯಾಣಿಸುತ್ತಿದ್ದರು. ಕ್ಯಾಮರೂನ್ ದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಭೂಕುಸಿತದಿಂದಾಗಿ ಈ ಅವಘಡ ಸಂಭವಿಸಿದೆ.
ಈ ದುರ್ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಅಲೈನ್ ಮೆಬೇ ಎಂದು 300ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ