ಶತ್ರು ಸಂಹಾರಕ್ಕಾಗಿ ಇರಾನ್​ನಿಂದ ‘ಆತ್ಮಾಹುತಿ ಡ್ರೋಣ್’ ನಿರ್ಮಾಣ

ನೆಲದ ಮೇಲೆ ಮತ್ತು ಸಮುದ್ರದ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಹಾಗೂ ವಿಶಿಷ್ಟ ಬಗೆಯ...
ಆತ್ಮಾಹುತಿ ದ್ರೋಣ್
ಆತ್ಮಾಹುತಿ ದ್ರೋಣ್
ಟೆಹರಾನ್‌, ಇರಾನ್‌: ನೆಲದ ಮೇಲೆ ಮತ್ತು ಸಮುದ್ರದ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಹಾಗೂ ವಿಶಿಷ್ಟ ಬಗೆಯ ಆತ್ಮಾಹುತಿ ಡ್ರೋನ್‌ ಅಭಿವೃದ್ಧಿಪಡಿಸಿರುವುದಾಗಿ ಇರಾನ್ ನ ಎಲೈಟ್ ರೆವಲ್ಯೂಶನರಿ ಗಾರ್ಡ್ಸ್‌ ಬುಧವಾರ ತಿಳಿಸಿದೆ.
ಪ್ರಮುಖವಾಗಿ ಸಮುದ್ರದ ಮೇಲಿನ ಗುರಿಗಳ ಮೇಲೆ ದಾಳಿ ನಡೆಸಲು ಈ ಡ್ರೋಣ್ ಅಭಿವೃದ್ಧಿ ಪಡಿಸಲಾಗಿದೆ. ಈ ಡ್ರೋಣ್ ಕ್ಷಿಪಣಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿಲ್ಲ. ಆದರೆ, ಭಾರೀ ಪ್ರಮಾಣದ ಸ್ಪೋಟಕಗಳನ್ನು ಹೊತ್ತೊಯ್ದು ನಿಗದಿತ ಗುರಿಯ ಮೇಲೆ ಆತ್ಮಾಹುತಿ ದಾಳಿ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಇರಾನ್ ಸೇನೆ ತಿಳಿಸಿದೆ.
ಸಾಗರ ಸಮರ ಹಾಗೂ ಕಣ್ಗಾವಲು ಉದ್ದೇಶಕ್ಕಾಗಿ ರೂಪಿಸಲಾಗಿರುವ ಈ ವಿನೂತನ ಆತ್ಮಾಹುತಿ ಡ್ರೋನ್‌, ಕ್ಷಿಪಣಿ ವಾಹಕ ಅಲ್ಲ; ಆದರೆ ಇದು ಭಾರೀ ಪ್ರಮಾಣದ ಸ್ಫೋಟಕಗಳನ್ನು ಒಯ್ಯುವ ಸಾಮರ್ಥ್ಯವನ್ನು  ಹೊಂದಿದೆ ಮತ್ತು ಆ ಮೂಲಕ ಅದು ಆತ್ಮಾಹುತಿ ದಾಳಿಗಳನ್ನು ಅತ್ಯಂತ ಕರಾರುವಾಕ್‌ ಹಾಗೂ ಪರಿಣಾಮಕಾರಿಯಾಗಿ  ಕೈಗೊಳ್ಳುತ್ತವೆ  ಎಂದು ರೆವಲ್ಯೂಶನರಿ ಗಾರ್ಡ್ಸ್‌ಗೆ ನಿಕಟವಾಗಿರುವ ತಸ್‌ನಿನ್‌ ಸುದ್ದಿ ಸಂಸ್ಥೆ ಹೇಳಿದೆ.
ಸಮುದ್ರದ ನೀರಿಗೆ ಕೇವಲ ಎರಡು ಅಡಿ ಎತ್ತರದಲ್ಲಿ  ಈ ಡ್ರೋನ್‌ ಗಂಟೆಗೆ 150 ಮೈಲುಗಳ (250 ಕಿ.ಮೀ.) ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ಕ್ಷಣಾರ್ಧದಲ್ಲಿ ಅದು 900 ಮೀಟರ್‌ಗಳ (ಸುಮಾರು 3,000 ಅಡಿ) ಎತ್ತರವನ್ನು ತಲುಪಬಲ್ಲುದು  ಎಂದು ತಸ್‌ನಿನ್‌ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com