2186 ಇಸವಿಯವರೆಗೆ ಮಹಿಳೆ-ಪುರುಷರ ಮಧ್ಯೆ ಆರ್ಥಿಕ ಸಮಾನತೆ ಅಸಾಧ್ಯ!

ಕೆಲಸದ ಸ್ಥಳದಲ್ಲಿ, ವೇತನದಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಲಿಂಗ ತಾರತಮ್ಯವನ್ನು ಹೋಗಲಾಡಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಕೆಲಸದ ಸ್ಥಳದಲ್ಲಿ, ವೇತನದಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆ ತರುವ ಪ್ರಯತ್ನ ನಡೆಯುತ್ತಲೇ ಇದೆ. ಆದರೂ ಕೂಡ ಮುಂದಿನ 170 ವರ್ಷಗಳವರೆಗೆ ಆರ್ಥಿಕ ಸಮಾನತೆ ಮಹಿಳೆ-ಪುರುಷರಲ್ಲಿ ಬರಲು ಸಾಧ್ಯವಿಲ್ಲ ಎಂದು ವಿಶ್ವ ಆರ್ಥಿಕ ವೇದಿಕೆ ಹೇಳಿದೆ.
ಕಳೆದ ವರ್ಷದ ಅಂಕಿಅಂಶ ಪ್ರಕಾರ, ಆರ್ಥಿಕ ಅಸಮಾನತೆ 118 ವರ್ಷಗಳಲ್ಲಿ ಕೊನೆಯಾಗಬಹುದು ಎಂದು ಹೇಳಿದರೂ ಕೂಡ ಬೆಳವಣಿಗೆ ಕುಂಠಿತವಾಗಿದೆ ಎಂದು ಸ್ವಿರ್ಜರ್ಲೆಂಡ್ ಮೂಲದ ಲಾಭ ರಹಿತ ಡಬ್ಲ್ಯುಇಎಫ್ ತನ್ನ ವಾರ್ಷಿಕ ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ತಿಳಿಸಿದೆ.
ಅಂಕಿಅಂಶವು ಪ್ರಸ್ತುತದ ಬೆಳವಣಿಗೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಹೇಳುತ್ತದೆ ಎಂದು ಡಬ್ಲ್ಯುಇಎಫ್ ನ ಕಾರ್ಯಕಾರಿ ಸಮಿತಿಯ ಸದಸ್ಯ ಸಾದಿಯಾ ಜಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವದಲ್ಲಿ, ಮಹಿಳೆ ಮತ್ತು ಪುರುಷರ ಮಧ್ಯೆ ಶಿಕ್ಷಣ, ಆರೋಗ್ಯ ಮತ್ತು ಬದುಕುವ ರೀತಿ ನೀತಿ, ಆರ್ಥಿಕ ಅವಕಾಶ ಮತ್ತು ರಾಜಕೀಯ ಶಕ್ತಿ ವಿಚಾರದಲ್ಲಿ ಐಲ್ಯಾಂಡ್ ಮತ್ತು ಫಿನ್ ಲ್ಯಾಂಡ್ ಉನ್ನತ ಸ್ಥಾನದಲ್ಲಿವೆ. ನಾರ್ವೆ, ಸ್ವೀಡನ್, ರ್ವಾಂಡ ಗಳು ಆರ್ಥಿಕತೆ ವಿಚಾರದಲ್ಲಿ ಪ್ರಗತಿ ಹೊಂದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com