ದಕ್ಷಿಣ ಕೆರಿಬ್ಬಿಯನ್ ನ ಟ್ರಿನಿಡಾಡ್ ನಲ್ಲೂ ದೀಪಾವಳಿ ಆಚರಣೆ!

ಭಾರತದಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ದಕ್ಷಿಣ ಕೆರಿಬ್ಬಿಯನ್ ನ ದ್ವೀಪ ರಾಷ್ಟ್ರ ಟ್ರಿನಿಡಾಡ್ ನಲ್ಲೂ ಸಹ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ದಕ್ಷಿಣ ಕೆರಿಬ್ಬಿಯನ್ ನ ಟ್ರಿನಿಡಾಡ್ ನಲ್ಲೂ ದೀಪಾವಳಿ ಆಚರಣೆ!
ದಕ್ಷಿಣ ಕೆರಿಬ್ಬಿಯನ್ ನ ಟ್ರಿನಿಡಾಡ್ ನಲ್ಲೂ ದೀಪಾವಳಿ ಆಚರಣೆ!

ಪೋರ್ಟ್ ಆಫ್ ಸ್ಪೇನ್: ಭಾರತದಾದ್ಯಂತ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ದಕ್ಷಿಣ ಕೆರಿಬ್ಬಿಯನ್ ನ ದ್ವೀಪ ರಾಷ್ಟ್ರ ಟ್ರಿನಿಡಾಡ್ ನಲ್ಲೂ ಸಹ ದೀಪಾವಳಿಯನ್ನು ಆಚರಿಸಲಾಗುತ್ತಿದೆ.

1966 ರಿಂದ ಟ್ರಿನಿಡಾಡ್ ನಲ್ಲಿ ದೀಪಾವಳಿ ಆಚರಣೆ ಅಧಿಕೃತವಾಗಿ ನಡೆಯುತ್ತಿದ್ದು, ಕಳೆದ ಏಳು ದಿನಗಳಿಂದ ಪ್ರಧಾನಿ ನಿವಾಸ ಸೇರಿದಂತೆ ಸರ್ಕಾರಿ ಅಧಿಕಾರಿಗಳ ನಿವಾಸಗಳಲ್ಲಿ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರದ ಜನತೆಗೆ ದೀಪಾವಳಿ ಸಂದೇಶ ರವಾನೆ ಮಾಡಿರುವ ಟ್ರಿನಿಡಾಡ್ ನ ರಾಷ್ಟ್ರಾಧ್ಯಕ್ಷ ಆಂಟೋನಿ ಕಾರ್ಮೋನ, ಏಕತೆಯನ್ನು ತರಲು ದೀಪಾವಳಿ ಒಂದು ಹಬ್ಬ ಒಂದು ಅತ್ಯುತ್ತಮ ಅವಕಾಶ ಎಂದು ಬಣ್ಣಿಸಿದ್ದಾರೆ.

ದೀಪಾವಳಿ ಹಬ್ಬ ಧಾರ್ಮಿಕ ಸೌಹಾರ್ದತೆ ಹಾಗು ಏಕತೆಯನ್ನು ಸಾರುವುದಕ್ಕೆ ಇರುವ ಅತ್ಯುತ್ತಮ ಸಂದರ್ಭವಾಗಿದ್ದು, ದೀಪಾವಳಿ ಹಬ್ಬದ ನಂತರವೂ ಸೌಹಾರ್ದತೆ ಮುಂದುವರೆಯಲಿ ಎಂದು ರಾಷ್ಟ್ರಾಧ್ಯಕ್ಷ ಅಂತೋನಿ ಕಾರ್ಮೋನ ತಿಳಿಸಿದ್ದಾರೆ. ಇನ್ನು ಟ್ರೆನಿಡಾಡ್ ನ ವಿರೋಧ ಪಕ್ಷದ ನಾಯಕರೂ ಸಹ ದೀಪಾವಳಿ ಶುಭಾಶಯ ಕೋರಿದ್ದು, ದೀಪಗಳ ಮೂಲಕ ಅಂಧಕಾರವನ್ನು ಹೋಗಲಾಡಿಸುವಂತೆ ಜನರಿಗೆ ಕರೆ ನೀಡಿದ್ದಾರೆ.

ಇನ್ನು ಭಾರತದ ಹೈಕಮಿಷನರ್ ಬಿಸ್ವದೀಪ್ ಡೇ ಸಹ ದೀಪಾವಳಿ ಶುಭಾಶಯ ಕೋರಿದ್ದು, ಕಟ್ಟಲು ಅಂಧಕಾರವನ್ನು ಪ್ರತಿನಿಧಿಸುತ್ತದೆ. ದೀಪಾ ಜ್ಞಾನದ ಸಂಕೇತವಾಗಿದ್ದು, ದೀಪ ಹಚ್ಚುವ ಮೂಲಕ ಅಜ್ಞಾನವನ್ನು ಹೋಗಲಾಡಿಸೋಣ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com