ಜೀವ ಮಾನದ ಸಾಧನೆಗಾಗಿ ಜಾಕಿಚಾನ್ ಗೆ ಆಸ್ಕರ್ ಪ್ರಶಸ್ತಿ

ಮಾರ್ಷಲ್ ಆರ್ಟ್ಸ್ ಪ್ರವೀಣ ಹಾಗೂ ನಟ ಜಾಕಿ ಚಾನ್ ಗೆ ಜೀವ ಮಾನದ ಅತ್ಯುತ್ತುಮ ಸಾಧನೆಗಾಗಿ ಆಸ್ಕರ್ ಪ್ರಶಸ್ತಿ ಘೋಷಿಸಲಾಗಿದೆ...
ಜಾಕಿ ಚಾನ್
ಜಾಕಿ ಚಾನ್

ನವದೆಹಲಿ: ಮಾರ್ಷಲ್ ಆರ್ಟ್ಸ್ ಪ್ರವೀಣ ಹಾಗೂ ನಟ ಜಾಕಿ ಚಾನ್ ಗೆ ಜೀವ ಮಾನದ ಅತ್ಯುತ್ತುಮ ಸಾಧನೆಗಾಗಿ  ಆಸ್ಕರ್ ಪ್ರಶಸ್ತಿ ಘೋಷಿಸಲಾಗಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ 62 ವರ್ಷದ ಜಾಕಿ ಚಾನ್ ಗೆ ಈ ಪ್ರಶಸ್ತಿ ಘೋಷಿಸಿದೆ.

ಹಾಲಿವುಡ್ ಸಿನಿಮಾಗಳಾದ ಕುಂಗ್ ಫು ಪಾಂಡಾ, ದಿ ಕರಾಟೆ ಕಿಡ್ ಮತ್ತು ರಷ್ ಅವರ್ ಸಿನಿಮಾಗಳಲ್ಲಿ ಜಾಕಿ ಜಾನ್ ನಟಿಸಿದ್ದಾರೆ.

ಹಾಂಕ್ ಕಾಂಗ್ ನಲ್ಲಿ ಜನಿಸಿದ ಜಾಕಿಚಾನ್ ಗೆ 2016 ರಲ್ಲಿ ಗವರ್ನರ್ಸ್ ಆವಾರ್ಡ್ ಕೂಡ ಲಭಿಸಿದೆ.

ಲಾಸ್ ಏಂಜಲೀಸ್ ನಲ್ಲಿ ನವೆಂಬರ್ ನಲ್ಲಿ ನಡೆಯುವ  ಸಮಾರಂಭದಲ್ಲಿ ಜಾಕಿ ಚಾನ್ ಗೆ ಈ ಪ್ರಶಸ್ತಿ ವಿತರಣೆ ಮಾಡಲಾಗುವುದು. ತನ್ನ 8ನೇ ವಯಸ್ಸಿಗೆ ನಟನೆ ಆರಂಭಿಸಿದ ಜಾಕಿ ಹಾಂಗ್ ಕಾಂಗ್ ನ ಸುಮಾರು 30 ಮಾರ್ಷಲ್ ಆರ್ಟ್ಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

2016ರ ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಜಾಕಿಚಾನ್ ಎರಡನೇ ಸ್ಥಾನ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com