ಭಾರತೀಯ ಮೂಲದ ಪ್ರಿಯಾಂಕಾಗೆ ಮಿಸ್ ಜಪಾನ್ ಪಟ್ಟ

ಭಾರತೀಯ ಮೂಲದ 22 ವರ್ಷದ ಪ್ರಿಯಾಂಕ ಯೋಶಿಕೋವಾ ಮಿಸ್ ಜಪಾನ್ ಪಟ್ಟ ಅಲಂಕರಿಸಿದ್ದಾರೆ...
ಪ್ರಿಯಾಂಕಾ ಯೋಶಿಕೋವಾ
ಪ್ರಿಯಾಂಕಾ ಯೋಶಿಕೋವಾ
ಟೋಕಿಯೋ: ಭಾರತೀಯ ಮೂಲದ 22 ವರ್ಷದ ಪ್ರಿಯಾಂಕ ಯೋಶಿಕೋವಾ ಮಿಸ್ ಜಪಾನ್ ಪಟ್ಟ ಅಲಂಕರಿಸಿದ್ದಾರೆ. 
ಇದೇ ಮೊದಲ ಬಾರಿಗೆ ಜಪಾನೇತರ ಯುವತಿಗೆ ಈ ಪಟ್ಟ ಸಿಕ್ಕಿದ್ದು, ಮಿಸ್ ಜಪಾನ್ ಪಟ್ಟವನ್ನು ಜಪಾನ್ ಯುವತಿಗೆ ನೀಡಬೇಕಿತ್ತು ಎಂಬ ವಾದ ವಿವಾದಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಎಲಿಫಾಂಟ್ ಟ್ರೈನರ್ ಲೈಸನ್ಸ್ ಸಂಸ್ಥೆ ನಡೆಸಿದ ಮಿಸ್ ಜಪಾನ್ ಸ್ಪರ್ಧೆಯಲ್ಲಿ ಜನಾಂಗೀಯ ಸಮಾನತೆ ಎಂಬ ತತ್ವವನ್ನಿಟ್ಟುಕೊಂಡು ಈ ಪ್ರಶಸ್ತಿಯನ್ನು ಪ್ರಿಯಾಂಕಗೆ ನೀಡಿತ್ತು. 
ಮಿಸ್ ಜಪಾನ್ ಪ್ರಿಯಾಂಕ ಅವರ ತಂದೆ ಭಾರತೀಯ ಮೂಲದವರಾಗಿದ್ದು ಜಪಾನ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದರು. 
ಹೀಗಾಗಿ ಮಿಸ್ ಜಪಾನ್ ಪಟ್ಟವನ್ನು ಜಪಾನ್ ಮೂಲದ ಯುವತಿಗೆ ನೀಡಬೇಕಿತ್ತು ಅದನ್ನು ಬಿಟ್ಟು ಹಾಫ್ ಇಂಡಿಯನ್ ಯುವತಿಗೆ ಪಟ್ಟ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜಪಾನಿ ಭಾಷೆಯ Haafu(ಮಿಶ್ರ ಜನಾಂಗ) ಎಂಬ ಹ್ಯಾಷ್ ಟ್ಯಾಗ್ ಬಳಿಸಿ ಚರ್ಚೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com