ನವಾಜ್ ಷರೀಫ್
ವಿದೇಶ
ಪ್ರಧಾನಿ ನವಾಜ್ ಷರೀಫ್ ಕುಟುಂಬದ ಕಾರ್ಖಾನೆಯಲ್ಲಿ 300 ಭಾರತೀಯರು ಕೆಲಸ
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕುಟುಂಬದ ಸಕ್ಕರೆ ಕಾರ್ಖಾನೆಯಲ್ಲಿ 300 ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನ ಅವಾಮಿ...
ಲಾಹೋರ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕುಟುಂಬದ ಸಕ್ಕರೆ ಕಾರ್ಖಾನೆಯಲ್ಲಿ 300 ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನ ಅವಾಮಿ ತೆಹ್ರಾಕ್(ಪಿಎಟಿ) ಮುಖ್ಯಸ್ಥ ತಹಿರೂಲ್ ಕ್ವಾದ್ರಿ ಆರೋಪಿಸಿದ್ದಾರೆ.
ಷರೀಫ್ ಬ್ರದರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 50 ಮಂದಿ ಭಾರತೀಯ ಪಟ್ಟಿಯನ್ನು ತಹಿರೂಲ್ ಕ್ವಾದ್ರಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಪೊಲೀಸರ ಪ್ರಕಾರ ಸಕ್ಕರೆ ಕಾರ್ಖಾನೆಯಲ್ಲಿ 300 ಮಂದಿ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲಾ ಉಚಿತ, ಬಹು ಪ್ರವೇಶ ವೀಸಾಗಳ ಮೂಲಕ ಪಾಕಿಸ್ತಾನಕ್ಕೆ ನೆಲೆಸಿದ್ದಾರೆ. ಇವರಿಗೆ ಷರೀಫ್ ಒಡೆತನದ ಸಕ್ಕರೆ ಕಾರ್ಖಾನೆಯ ಲೆಟರ್ ಹೆಡ್ ನಲ್ಲಿ ಪೊಲೀಸ ವಿಚಾರಣೆಯಿಂದ ವಿನಾಯಿತಿ ನೀಡಿ ವೀಸಾ ನೀಡುವಂತೆ ದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಗೆ ಸೂಚಿಸಲಾಗಿತ್ತು ಎಂದು ಆರೋಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ