ತಂಜಾನಿಯಾ ಭೂಕಂಪ: 11 ಸಾವು, 200 ಕ್ಕೂ ಹೆಚ್ಚು ಜನಕ್ಕೆ ಗಾಯ

ರಿಕ್ಟರ್ ಮಾಪನದಲ್ಲಿ 5.7 ತೀವ್ರತೆಯ ಭೂಕಂಪ ವಾಯುವ್ಯ ತಂಜಾನಿಯಾದಲ್ಲಿ ಸಂಭವಿಸಿದ್ದು, 11 ಜನ ಮೃತಪಟ್ಟು 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಡೋಡೋಮ: ರಿಕ್ಟರ್ ಮಾಪನದಲ್ಲಿ 5.7 ತೀವ್ರತೆಯ ಭೂಕಂಪ ವಾಯುವ್ಯ ತಂಜಾನಿಯಾದಲ್ಲಿ ಸಂಭವಿಸಿದ್ದು, 11 ಜನ ಮೃತಪಟ್ಟು 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 
ವಿಕ್ಟೊರಿಯಾ ಸರೋವರದ ತಟದಲ್ಲಿರುವ ಕಗೇರಾ ಮತ್ತು ವಾಂಜಾ ಪ್ರದೇಶಗಳಲ್ಲಿ ಭೂಕಂಪ ತೀವ್ರವಾಗಿ ಅಪ್ಪಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಬುಕೋಬಾ ದಿಂದ 44 ಕಿಮಿ ದೂರದಲ್ಲಿ 10 ಕಿಲೋಮೀಟರ್ ಭೂಭಾಗದ ಒಳಗೆ ಭೂಕಂಪನ ಕೇಂದ್ರ ದಾಖಲಾಗಿದೆ ಎಂದು ತಿಳಿಯಲಾಗಿದೆ. ನೂರಾರು ಮನೆಗಳ ಆಸ್ತಿ ಪಾಸ್ತಿ ಭೂಕಂಪನದಿಂದ ನಷ್ಟವಾಗಿದೆ ಎಂದು ಕಗೇರಾದ ಪ್ರಾದೇಶಿಕ ಕಮಿಷನರ್ ಸಾಲುಮ್ ಕೀಜು ಹೇಳಿದ್ದಾರೆ. 
ಅಧಿಕಾರಿಗಳ ಹೇಳುವಂತೆ ಪೂರ್ವ ಕೀನ್ಯಾವರೆಗೂ ಭೂಮಿ ಕಂಪಿಸಿದೆ ಎಂದಿದ್ದಾರೆ. ಪ್ರಾದೇಶಿಕ ಆಸ್ಪತ್ರೆಗಳು ತುಂಬಿಹೋಗಿದ್ದು, ಹೆಚ್ಚಿನ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕೆ ತೊಂದರೆಯಾಗುತ್ತಿದೆ ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ಬಿಬಿಸಿ ವಾಹಿನಿಗೆ ಹೇಳಿದ್ದಾರೆ.
ಹಲವಾರು ಕಟ್ಟಡಗಳು ಕುಸಿದಿದ್ದು, ಬಹಳಷ್ಟು ಜನ ಅವಶೇಷಗಳಲ್ಲಿ ಸಿಲುಕಿರುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com