ಸಿಯೋಲ್: ಐದನೇ ಪರಮಾಣು ಪರೀಕ್ಷೆ ನಡೆಸಿ ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿರುವ ಉತ್ತರ ಕೊರಿಯಾ ಈಗ ಮತ್ತೊಂದು ಪರೀಕ್ಷೆ ನಡೆಸಲು ಸಿದ್ಧವಾಗಿದೆ ಎಂದು ದಕ್ಷಿಣ ಕೊರಿಯಾ ಸೇನೆ ಸೋಮವಾರ ಹೇಳಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ಬೇಹುಗಾರಿಕಾ ಅಧಿಕಾರಿಗಳ ಪ್ರಕಾರ ಉತ್ತರ ಕೊರಿಯಾ ತಮ್ಮ ಪ್ರಮುಖ ಪರಮಾಣು ಪರಿಕ್ಷಾ ಕೇಂದ್ರ ಪುಂಗ್ಯೆ ರೀ ಪ್ರದೇಶದಲ್ಲಿ ಮತ್ತೊಂದು ಪರೀಕ್ಷೆ ನಡೆಸಲು ಸದಾ ಸಿದ್ಧವಾಗಿದೆ ಎಂದು ಭದ್ರತಾ ವಕ್ತಾರ ಮೂನ್ ಸ್ಯಾಂಗ್-ಕ್ಯುನ್ ಹೇಳಿದ್ದಾರೆ.
ಪುಂಗ್ಯೆ ರೀ ಪ್ರದೇಶದ ಬಳಿ ಭೂಗತ ಪರಮಾಣು ಪರೀಕ್ಷೆಗಾಗಿ ಹೊಸದಾಗಿ ಮೂರೂ ಸುರಂಗಗಳನ್ನು ಕೊರೆದಿರುವ ಹಿನ್ನಲೆಯಲ್ಲಿ ಈ ಹೊಸ ಪರೀಕ್ಷೆಯ ಮುನ್ಸೂಚನೆ ದೊರೆತು ಎಚ್ಚರಿಕೆ ನೀಡಲಾಗಿದೆ.
"ಉತ್ತರ ಕೊರಿಯಾ ಹೆಚ್ಚುವರಿ ಪರಮಾಣು ಪರೀಕ್ಷೆ ನಡೆಸಿದರೆ, ಇದು ಎರಡನೇ ಅಥವಾ ಮೂರನೇ ಸುರಂಗದದಿಂದ ನಡೆಯುವ ಸಾಧ್ಯತೆ ಇದೆ" ಎಂದು ಕೂಡ ಮೂನ್ ಹೇಳಿದ್ದಾರೆ.