ವಿದೇಶ
ಚೀನಾ ಅಧ್ಯಕ್ಷರ ನೇಪಾಳ ಭೇಟಿ ರದ್ದುಗೊಂಡಿಲ್ಲ: ಚೀನಾ ಸ್ಪಷ್ಟನೆ
ಅಕ್ಟೊಬರ್ ನಲ್ಲಿ ನಿಗದಿಯಾಗಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ನೇಪಾಳ ಭೇಟಿ ರದ್ದುಗೊಂಡಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ಬೀಜಿಂಗ್: ಅಕ್ಟೊಬರ್ ನಲ್ಲಿ ನಿಗದಿಯಾಗಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ನೇಪಾಳ ಭೇಟಿ ರದ್ದುಗೊಂಡಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ನೇಪಾಳಕ್ಕೆ ಚೀನಾ ಅಧ್ಯಕ್ಷರ ಭೇಟಿ ರದ್ದುಗೊಂಡಿದೆ ಎಂದು ಹೇಳುವುದು ಸರಿಯಲ್ಲ, ಭೇಟಿ ರದ್ದುಗೊಳಿಸುವ ಬಗ್ಗೆ ಈ ವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರರಾದ ಚುನ್ಯಿಂಗ್ ತಿಳಿಸಿದ್ದಾರೆ.
ನೇಪಾಳ ಹಾಗೂ ಚೀನಾ ಪರಸ್ಪರ ಸಂಪರ್ಕದಲ್ಲಿವೆ, ಚೀನಾ ನೇಪಾಳದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಚುನ್ಯಿಂಗ್ ಹೇಳಿದ್ದಾರೆ. ಕೆಲವು ಮಾಧ್ಯಮಗಳು ಚೀನಾ ಅಧ್ಯಕ್ಷರ ಭೇಟಿಗೆ ನೇಪಾಳದಲ್ಲಿ ಸರಿಯಾದ ಸಿದ್ಧತೆ ಇಲ್ಲದ ಕಾರಣ ಹಾಗೂ ನೇಪಾಳದ ನೀತಿಗಳು ಭಾರತದೆಡೆಗೆ ತಿರುಗಿದ್ದರ ಪರಿಣಾಮ ಅಕ್ಟೊಬರ್ ನಲ್ಲಿ ನಿಗದಿಯಾಗಿದ್ದ ಚೀನಾ ಅಧ್ಯಕ್ಷರ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂಬ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಸ್ಪಷ್ಟನೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ