ಈದ್ ಹಬ್ಬದ ದಿನ ಢಾಕಾದಲ್ಲಿ ಹರಿಯಿತು ರಕ್ತದ ಹೊಳೆ

ಈದ್ ಹಬ್ಬದ ಆಚರಣೆ ನಂತರ ಬಾಂಗ್ಲಾದೇಶ ರಾಜಧಾನಿ ಢಾಕಾದ ರಸ್ತೆಗಳಲ್ಲಿ ರಕ್ತದ ಹೊಳೆಯೆ ಹರಿದಿದೆ...
ರಕ್ತದ ಹೊಳೆ
ರಕ್ತದ ಹೊಳೆ
ಢಾಕಾ: ಈದ್ ಹಬ್ಬದ ಆಚರಣೆ ನಂತರ ಬಾಂಗ್ಲಾದೇಶ ರಾಜಧಾನಿ ಢಾಕಾದ ರಸ್ತೆಗಳಲ್ಲಿ ರಕ್ತದ ಹೊಳೆಯೆ ಹರಿದಿದೆ. 
ಮಂಗಳವಾರ ಈದ್ ಹಬ್ಬದ ಪ್ರಯುಕ್ತ ಪ್ರಾಣಿ ಬಲಿ ನೀಡಲಾಗಿತ್ತು. ಇದೇ ವೇಳೆ ಮಳೆಯೂ ಸುರಿದಿದ್ದರಿಂದ ರಕ್ತ ಮಳೆ ನೀರಿನೊಂದಿಗೆ ಬೆರೆತು ರಸ್ತೆಯಲ್ಲಿ ರಕ್ತದ ಹೊಳೆ ಹರಿದಿತ್ತು. ಇದರ ಭಯಾನಕ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 
ಈ ಇಂತರ ಭೀಕರ ದೃಶ್ಯಗಳನ್ನು ಕಂಡು ಸಾರ್ವಜನಿಕರು ಭಯಭೀತರಾಗಿದ್ದರು. ಒಳಚರಂಡಿಯ ನಿರ್ವಹಣೆ ಸರಿಯಾಗಿ ಮಾಡದೇ ಇದ್ದ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಪಾಲಿಕೆಯನ್ನು ಆರೋಪಿಸಿದ್ದಾರೆ. 
ಪ್ರಾಣಿಬಲಿಗಾಗಿ ಢಾಕಾದಲ್ಲಿ 900ಕ್ಕೂ ಹೆಚ್ಚು ಸ್ಥಳಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಕೆಲವರು ಪ್ರಾಣಿ ಬಲಿಗೆ ನಿಗದಿಪಡಿಸಿದ್ದ ಸ್ಥಳ ಮನೆಯಿಂದ ತುಂಬಾ ದೂರ ಎಂದು ರಸ್ತೆಗಳಲ್ಲಿಯೇ ಹಾಗೂ ತಮಗೆ ಬೇಕಾದ ಸ್ಥಳಗಳಲ್ಲಿಯೇ ಪ್ರಾಣಬಲಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com