ತಾಂಜಾನೀಯದಲ್ಲಿ ಪತ್ತೆಯಾದ ಅವಶೇಷಗಳು ಎಂಎಚ್ 370 ವಿಮಾನದ್ದು: ಮಲೇಷ್ಯಾ

ತಾಂಜಾನೀಯದಲ್ಲಿ ಪತ್ತೆಯಾದ ಅವಶೇಷಗಳು ಕಳೆದ ವರ್ಷ ನಿಗೂಢವಾಗಿ ನಾಪತ್ತೆಯಾಗಿದ್ದ ಎಂಎಚ್ 370 ವಿಮಾನದ್ದು ಎಂದು...
ಪತ್ತೆಯಾದ ವಿಮಾನದ ಅವಶೇಷ
ಪತ್ತೆಯಾದ ವಿಮಾನದ ಅವಶೇಷ
ಸಿಡ್ನಿ: ತಾಂಜಾನೀಯದಲ್ಲಿ ಪತ್ತೆಯಾದ ಅವಶೇಷಗಳು ಕಳೆದ ವರ್ಷ ನಿಗೂಢವಾಗಿ ನಾಪತ್ತೆಯಾಗಿದ್ದ ಎಂಎಚ್ 370 ವಿಮಾನದ್ದು ಎಂದು ಗುರುವಾರ ಮಲೇಷ್ಯಾ ಖಚಿತಪಡಿಸಿದೆ.
ಕಳೆದ ಜೂನ್ ನಲ್ಲಿ ತಾಂಜಾನೀಯದ ಪೆಂಬಾ ಐಸ್ ಲ್ಯಾಂಡ್ ನಲ್ಲಿ ಪತ್ತೆಯಾದ ಅವಶೇಷ ಎಂಎಚ್ 370 ವಿಮಾನಕ್ಕೆ ಸೇರಿದ್ದು ಎಂದು ಮಲೇಷ್ಯಾ ಸಾರಿಗೆ ಸಚಿವಾಲಯ ಹೇಳಿದೆ. 
ತಾಂಜಾನೀಯದಲ್ಲಿ ಪತ್ತೆಯಾದ ವಿಮಾನದ ರೆಕ್ಕೆ ಎಂಎಚ್ 370 ವಿಮಾನದ್ದು ಎಂದು ಆಸ್ಟ್ರೇಲಿಯಾ ತಜ್ಞರ ತಂಡ ದೃಢಪಡಿಸಿರುವುದಾಗಿ ಮಲೇಷ್ಯಾ ಸಚಿವಾಲಯ ಪತ್ರಿಕಾ ಪ್ರಕಟಣೆ ನೀಡಿದೆ. 
2014 ಮಾರ್ಚ್ 8ರಂದು ಬೋಯಿಂಗ್ 777-200 ವಿಮಾನ ಇದ್ದಕ್ಕಿದ್ದಂತೆ ರಾಡಾರ್ ನಿಂದ ಕಣ್ಮರೆಯಾಗಿತ್ತು. ಕೌಲಾಲಂಪುರದಿಂದ ಬೀಜಿಂಗ್ ಗೆ ಹೊರಟಿದ್ದ ಈ ವಿಮಾನ ರನ್ ವೇಯಿಂದ ಹಾರಿದ ಒಂದೇ ಗಂಟೆಯಲ್ಲಿ ನಾಪತ್ತೆಯಾಗಿತ್ತು. ಈ ವಿಮಾನದಲ್ಲಿ ಐವರು ಭಾರತೀಯರು ಸೇರಿದಂತೆ 239 ಪ್ರಯಾಣಿಕರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com