ಐಸಿಸ್ ಉಗ್ರರ ಮಾಜಿ ಲೈಂಗಿಕ ಸಂತ್ರಸ್ತೆ ಈಗ ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿ

ಐಸಿಸ್‌ ಉಗ್ರರ ಲೈಂಗಿಕ ಸಂತ್ರಸ್ತೆಯಾಗಿದ್ದ ನಾದಿಯಾ ಮುರಾದ್ ಈಗ ವಿಶ್ವ ಸಂಸ್ಥೆಯ ಮಾನವ ಕಳ್ಳಸಾಗಣೆಯ ವಿರುದ್ಧದ ಜನಜಾಗೃತಿ ಅಭಿಯಾನದ ಸದ್ಭಾವನಾ ...
ನಾದಿಯಾ ಮುರಾದ್
ನಾದಿಯಾ ಮುರಾದ್

ವಾಷಿಂಗ್ಟನ್‌ : ಐಸಿಸ್‌ ಉಗ್ರರ ಲೈಂಗಿಕ ಸಂತ್ರಸ್ತೆ ಯಾಗಿದ್ದ ನಾದಿಯಾ ಮುರಾದ್ ಈಗ ವಿಶ್ವ ಸಂಸ್ಥೆಯ ಮಾನವ ಕಳ್ಳಸಾಗಣೆಯ ವಿರುದ್ಧದ ಜನಜಾಗೃತಿ ಅಭಿಯಾನದ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶಿತಗೊಂಡಿರುವ ನಾದಿಯಾಳನ್ನು ವಿಶ್ವ ಸಂಸ್ಥೆ ಇಂದು ಸದ್ಭವನಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

23 ವರ್ಷದ ನಾದಿಯಾ ಮುಸ್ಲಿಮೇತರ ಯಾಝಿದಿ ಸಮುದಾಯಕ್ಕೆ ಸೇರಿದವಳು. ಹಾಗಾಗಿ ನಾದಿಯಾ ಸೇರಿದಂತೆ ಆಕೆಯ ಸಮುದಾಯದ ಅಸಂಖ್ಯಾತ ತರುಣಿಯರನ್ನು ಐಸಿಸ್‌ ಉಗ್ರರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಗುಲಾಮರನ್ನಾಗಿ ಮಾಡಿಕೊಂಡರು.

ಐಸಿಸ್‌ ಉಗ್ರರ ಕೈಯಲ್ಲಿ ನಾದಿಯಾ ಅನುಭವಿಸಿದ ನರಕ ಯಾತನೆಯ ಚಿತ್ರಹಿಂಸೆ, ಆಕೆಯೇ ಹೇಳುವಂತೆ, ಶಬ್ದಗಳಲ್ಲಿ ವರ್ಣಿಸಲಾಗದು. ಐಸಿಸ್‌ ಉಗ್ರರ ವಶದಲ್ಲಿದ್ದ ಮೂರು ತಿಂಗಳ ಅವಧಿಯಲ್ಲಿ ನಾದಿಯಾ ಮೇಲೆ ಉಗ್ರರು ದಿನ ನಿತ್ಯವೆಂಬಂತೆ ಅನೇಕ ಬಾರಿ ಅತ್ಯಾಚಾರ ನಡೆಸುತ್ತಿದ್ದರು. ಹಾಗಿರುತ್ತಾ ಒಂದು ದಿನ ನಾದಿಯಾ ಐಸಿಸ್‌ ಉಗ್ರರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಳು; ಆದರೆ ದುರದೃಷ್ಟವಶಾತ್‌ ಸಿಕ್ಕಿ ಬಿದ್ದಳು. ಆಗ ಆರು ಮಂದಿ ಪುರುಷರು, ಆಕೆ ಪ್ರಜ್ಞಾಹೀನಳಾಗುವ ತನಕವೂ, ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದರು.

ನನಗೆ ಅಲ್ಲಿ ಮತ್ತಷ್ಟು ಅತ್ಯಾಚಾರ ಹಾಗೂ ಹಿಂಸೆ ಸಹಿಸಿಕೊಳ್ಳಲು ಇಷ್ಟವಿರಲಿಲ್ಲ, ಹೀಗಾಗಿ ಅಲ್ಲಿಂದ ಓಡಿ ಬಂದು ಮುಸ್ಲಿಮರ ಮನೆಯಲ್ಲಿ ಆಶ್ರಯ ಪಡೆದೆ. ಅವರು ತಾನು ಕುರ್ದಿಸ್ತಾನದಿಂದ ತಪ್ಪಿಸಿಕೊಂಡು ಬರಲು ಸಹಾಯ ಮಾಡಿದರು ಎಂದು ಆಕೆ ತಿಳಿಸಿದ್ದಾಳೆ

2015ರಲ್ಲಿ ನಾದಿಯಾ ವಿಶ್ವಸಂಸ್ಥೆಯ ಪರಿಷತ್‌ ಸಭೆಯಲ್ಲಿ ತನ್ನ ನರಕಯಾತನೆಯ ಬದುಕನ್ನು ಪದರ ಪದರವಾಗಿ ತೆರೆದಿಟ್ಟಳು. ಸದ್ಯ ಆಕೆ ಜರ್ಮನಿಯಲ್ಲಿ ಆಶ್ರಯ ಪಡೆದು ತನ್ನ ಸೋಹದರಿ ಜತೆ ನೆಲೆಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com