ಬಲೂಚ್ ಪರ ಪ್ರಧಾನಿ ಮೋದಿ ಧ್ವನಿಗೆ ಕಂಗೆಟ್ಟ ಪಾಕ್
ನವದೆಹಲಿ: ಬಲೂಚಿಗರ ಮೇಲೆ ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಅಮಾನುಷ ದೌರ್ಜನ್ಯವೆಸಗಿ ಮಾನವ ಹಕ್ಕಗಳ ಸಾರಾ ಸಗಟು ಉಲ್ಲಂಘನೆ ಮಾಡುತ್ತಿರುವ ವಿಷಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಧ್ವನಿಯೆತ್ತಿದ್ದರಿಂದ ಪಾಕಿಸ್ತಾನ ತೀವ್ರವಾಗಿ ಕಂಗೆಟ್ಟಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಬಲೂಚ್ ಪ್ರತಿನಿಧಿಯಾಗಿರುವ ಮೆಹರಾನ್ ಮರ್ರಿ ಹೇಳಿದ್ದಾರೆ.
ದೆಹಲಿಯ ಕೆಂಪು ಕೋಟೆಯ ಮೇಲೆ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಬಲೂಚಿಸ್ಥಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಮಾನವ ಹಕ್ಕುಗಳ ಸಾರಾ ಸಗಟು ಉಲ್ಲಂಘನೆಯ ಬಗ್ಗೆ ವಿಶ್ವದ ಗಮನವನ್ನು ಸೆಳೆಯುತ್ತಿದ್ದು ಇದರಿಂದಾಗಿ ಪಾಕ್ ಸರ್ಕಾರ ತೀವ್ರವಾಗಿ ಕಂಗೆಟ್ಟಿದ್ದು ಬಲೂಚಿಸ್ಥಾನದಲ್ಲಿ ಕಳೆದ ಕೆಲವು ವಾರಗಳಿಂದ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಬಲೂಚಿಗರ ಅಪಹರಿಸಿ, ದಾಳಿ ಎಸಗುತ್ತಿದೆ ಎಂದು ಮರ್ರಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಎರಡು ದಿನಗಳ ಹಿಂದೆ ಮತ್ತೊಮ್ಮೆ ಬಲೂಚಿಸ್ಥಾನದ ವಿಷಯವನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಎತ್ತಿರುವುದಕ್ಕೆ ನಾವು ಭಾರತಕ್ಕೆ ತುಂಬಾ ಕೃತಜ್ಞರಾಗಿದ್ದೇವೆ ಎಂದು ಮೆಹರಾನ್ ಮರ್ರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ