ಭಾರತೀಯ ಕಂಪೆನಿಯಿಂದ ಮತಯಂತ್ರ ಖರೀದಿಸದಂತೆ ಪಾಕಿಸ್ತಾನದ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ

ಭಾರತೀಯ ಕಂಪೆನಿಯಿಂದ ವಿದ್ಯುನ್ಮಾನ ಮತ ಯಂತ್ರವನ್ನು ಖರೀದಿಸಬಾರದು ಎಂದು ಪಾಕಿಸ್ತಾನ ಚುನಾವಣಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಾಹೋರ್: ಭಾರತೀಯ ಕಂಪೆನಿಯಿಂದ ವಿದ್ಯುನ್ಮಾನ ಮತ ಯಂತ್ರವನ್ನು ಖರೀದಿಸಬಾರದು ಎಂದು ಪಾಕಿಸ್ತಾನ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಲಾಹೋರ್ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ.
ನಾಗರಿಕರ ಪರವಾಗಿ ರಿಟ್ ಅರ್ಜಿ ಸಲ್ಲಿಸಿರುವ ಅಡ್ವೊಕೇಟ್ ಅಜರ್ ಸಿದ್ದಿಕಿ, ಮುಂದಿನ ಸಾಮಾನ್ಯ ಚುನಾವಣೆಯನ್ನು ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ನಡೆಸಬೇಕೆಂದು ಬಯಸಿರುವುದರಿಂದ ಪಾಕಿಸ್ತಾನ ಚುನಾವಣಾ ಆಯೋಗ ವಿದ್ಯುನ್ಮಾನ ಮತ ಯಂತ್ರವನ್ನು ಖರೀದಿಸಲು ಹರಾಜು ತೆರೆದಿದೆ. 
ಮೂರು ಭಾರತೀಯ ಕಂಪೆನಿಗಳಾದ ಇಂದ್ರ ಕಮ್ರಾ, ರಿಲಾಯನ್ಸ್ ಮತ್ತು ಮೊರ್ಫೋ ಬಿಡ್ಡಿಂಗ್ ಗೆ ಅರ್ಜಿ ಹಾಕಿದ್ದು ಪಾಕಿಸ್ತಾನ ಚುನಾವಣಾ ಆಯೋಗ ಯಾವುದಾದರೊಂದು ಭಾರತೀಯ ಕಂಪೆನಿಗಳ ಹರಾಜನ್ನು ಅನುಮೋದಿಸುವ ಸಾಧ್ಯತೆಯಿದೆ.
ಭಾರತೀಯ ಕಂಪೆನಿಗಳಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಖರೀದಿಸಿದರೆ ಪಾಕಿಸ್ತಾನದ ಭದ್ರತೆಗೆ ಧಕ್ಕೆಯಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮುಂದಿನ ವಾರ ನಡೆಸಲಿದೆ ಎಂದು ನ್ಯಾಯಾಲಯದ ಅಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ, ಭಾರತದ ಯಾವುದೇ ಕಂಪೆನಿಯನ್ನೂ ಹರಾಜಿಗೆ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com