ಪಾಕ್ ನ್ನು ಉಗ್ರ ರಾಷ್ಟ್ರವೆಂದು ಘೋಷಿಸಲು ಆನ್ ಲೈನ್ ಅರ್ಜಿ: ಕೇವಲ 6 ದಿನಗಳಲ್ಲಿ 1 ಲಕ್ಷ ದಾಟಿದ ಸಹಿ ಸಂಖ್ಯೆ!

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ, ಶ್ವೇತ ಭವನ ನಡೆಸಿದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ಒಬಾಮ ಆಡಳಿತದ ಪ್ರತಿಕ್ರಿಯೆ...
ಪಾಕ್ ನ್ನು ಉಗ್ರ ರಾಷ್ಟ್ರವೆಂದು ಘೋಷಿಸಲು ಆನ್ ಲೈನ್ ಅರ್ಜಿ: ಕೇವಲ 6 ದಿನಗಳಲ್ಲಿ 1 ಲಕ್ಷ ದಾಟಿದ ಸಹಿ ಸಂಖ್ಯೆ!

ನ್ಯೂಯಾರ್ಕ್: ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ, ಶ್ವೇತ ಭವನ ನಡೆಸಿದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ಒಬಾಮ ಆಡಳಿತದ ಪ್ರತಿಕ್ರಿಯೆ ನೀಡಬೇಕಾಗಿದೆ.

ನಿರ್ದಿಷ್ಟ ಗಡುವಿನೊಳಗೆ ಆನ್ ಲೈನ್ ಗೆ ನಿರೀಕ್ಷಿತ ಸಂಖ್ಯೆಯಲ್ಲಿ ಸಹಿ ಸಂಗ್ರವಾದರೆ ಒಬಾಮ ಆಡಳಿತ ಅಂದರೆ ಶ್ವೇತ ಭವನ ಆ ವಿಷಯದ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಶ್ವೇತ ಭವನ ಹಲವು ವಿಚಾರಗಳಲ್ಲಿ ಈ ಹಿಂದೆಯೂ ಇಂತಹ ಆನ್ ಲೈನ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿತ್ತು.

ಪ್ರಸ್ತುತ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವ ಬಗ್ಗೆ ಪ್ರಾರಂಭಿಸಲಾಗಿದ್ದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಭರಪೂರ ಪ್ರತಿಕ್ರಿಯೆ ದೊರೆತಿದ್ದು, ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ 60 ದಿನಗಳಲ್ಲಿ ಒಬಾಮ ಆಡಳಿತ ಪ್ರತಿಕ್ರಿಯೆ ನೀಡುವ ನಿರೀಕ್ಷೆ ಇದೆ. ಸೆ.21 ರಂದು ಪ್ರಾರಂಭವಾಗಿದ್ದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನಕ್ಕೆ ಕೇವಲ ಆರು ದಿನಗಳಲ್ಲಿ 1 ಲಕ್ಷ ಜನರು ಸಹಿ ಹಾಕಿದ್ದು ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಅಮೆರಿಕ ಕಾಂಗ್ರೆಸ್ ನಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರಾಗಿರುವ ಟೆಡ್ ಪೋ ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಪ್ರವರ್ತಿಸುವ ದೇಶವೆಂದು ಪರಿಗಣಿಸುವ ಮಸೂದೆಯನ್ನು ಮಂಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com