ಅಮೆರಿಕಾಕ್ಕೆ ಪ್ರೌಢ ವ್ಯಕ್ತಿ ಅಧ್ಯಕ್ಷರಾಗಬೇಕು: ಮಿಷೆಲ್ ಒಬಾಮಾ

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಅಮೆರಿಕ ಅಧ್ಯಕ್ಷ...
ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಿಷೆಲ್  ಒಬಾಮಾ
ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಿಷೆಲ್ ಒಬಾಮಾ
ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಷೆಲ್  ಒಬಾಮಾ, ಅಮೆರಿಕ ಶ್ವೇತಭವನಕ್ಕೆ ಪ್ರೌಢ ವ್ಯಕ್ತಿಯ ಅಗತ್ಯವಿದೆಯೇ ಹೊರತು ಅನಿರ್ದಿಷ್ಟವಾಗಿ ವರ್ತಿಸುವ ಮತ್ತು ಬೆದರಿಕೆಯೊಡ್ಡುವ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.
ಜೀವನ-ಸಾವು, ಯುದ್ಧ-ಶಾಂತಿಯ ವಿಷಯ ಬಂದಾಗ ಒಬ್ಬ ಅಧ್ಯಕ್ಷನಾದವನು ಯುಕ್ತಿರಹಿತವಾಗಿ ಹೊಡೆದಾಡಲು ಸಾಧ್ಯವಿಲ್ಲ. ಅಮೆರಿಕಾಕ್ಕೆ ಒಬ್ಬ ಸಮರ್ಥ ಪ್ರೌಢ ಮತ್ತು ಸಹಾನುಭೂತಿ ಇರುವ ವ್ಯಕ್ತಿ ಅಧ್ಯಕ್ಷರಾಗಬೇಕು. ನಾನು ನಿಮಗೆ ಭರವಸೆ ಕೊಡುತ್ತೇನೆ'' ಎಂದು ಮಿಷೆಲ್ ಒಬಾಮಾ ಫಿಲಡೆಲ್ಫಿಯಾದಲ್ಲಿ  ಡೊಲಾಲ್ಡ್ ಟ್ರಂಪ್ ಅವರ ಹೆಸರನ್ನು ಸೂಚಿಸದೆ ಹಿಲರಿ ಕ್ಲಿಂಟನ್ ಪರ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಹೇಳಿದರು.
'' ಅಧ್ಯಕ್ಷರಾದವರು ಮಕ್ಕಳಿಗೂ ಸಹ ಆದರ್ಶರಾಗಿರಬೇಕು. ಕೇವಲ ವೈಯಕ್ತಿಕ ಹಿತಾಸಕ್ತಿ ನೋಡಿಕೊಂಡರೆ ಸಾಲದು, ಇಡೀ ದೇಶದ ಹಿತವನ್ನು ಕಾಪಾಡುವವರಾಗಬೇಕು.'' ಎಂದರು.
ಅಮೆರಿಕದ ಮುಂದಿನ ಅಧ್ಯಕ್ಷ ಹುದ್ದೆಗೆ ಉತ್ತಮ ಉದಾಹರಣೆ ಹಿಲರಿ ಕ್ಲಿಂಟನ್. ನಾನು ಅವರ ಧೈರ್ಯ, ಹಠಮಾರಿತನ, ಹೃದಯ ವೈಶಾಲ್ಯತೆಗೆ ತಲೆಬಾಗಿದ್ದೇನೆ ಎಂದು ಮಿಷೆಲ್  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com