ವಿವಾದಾತ್ಮಕ 'ರೇಸಿಸ್ಟ್' ಜಾಹೀರಾತು ಹಿಂಪಡೆದ ನಿವಿಯಾ ಸ್ಕಿನ್ ಕೇರ್

ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಜರ್ಮನ್ ನ ನಿವಿಯಾ ಸ್ಕಿನ್ ಕೇರ್ ಕಂಪನಿ ತಮ್ಮ ವಿವಾದಾತ್ಮಕ ರೇಸಿಸ್ಟ್ ಜಾಹೀರಾತನ್ನು ...
ನಿವಿಯಾ
ನಿವಿಯಾ
ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಜರ್ಮನ್ ನ ನಿವಿಯಾ ಸ್ಕಿನ್ ಕೇರ್ ಕಂಪನಿ ತಮ್ಮ ವಿವಾದಾತ್ಮಕ ರೇಸಿಸ್ಟ್ ಜಾಹೀರಾತನ್ನು ಹಿಂಪಡೆದಿದೆ.
ನಿವಿಯಾ ಡಿಯೋಡರೆಂಟ್ ಜಾಹೀರಾತಿನಲ್ಲಿ ಮಹಿಳೆಯ ಚಿತ್ರ ಬಳಸಿಕೊಂಡು "ವೈಟ್ ಪರಿಶುದ್ದವಾದದ್ದು." ಎಂಬ ಶ್ಲೋಗನ್ ಹಾಕಿಕೊಂಡಿತ್ತು.
ಮಧ್ಯಪ್ರಾಚ್ಯದ ಫೇಸ್ ಬುಕ್  ಪೇಜ್ ನಲ್ಲಿ ಈ ಜಾಹಿರಾತನ್ನು ಪ್ರಕಟಿಸಿ Keep it clean, keep it bright. Don't let anything ruin it ಎಂಬ ಶೀರ್ಷಿಕೆ ನೀಡಿತ್ತು. 
ಈ ಪೋಸ್ಟ್ ನಂತರ ಜಾಹೀರಾತಿನಲ್ಲಿ ಜನಾಂಗೀಯ ತಾರತಮ್ಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಯಿತು. ಇದೇ ಮೊದಲಲ್ಲ, 2011 ರಲ್ಲೂ ನಿವಿಯಾ ಬ್ರ್ಯಾಂಡ್ ರೇಸಿಸ್ಟ್ ಜಾಹೀರಾತು ಪ್ರದರ್ಶಿಸಿ ನಂತರ ಕ್ಷಮೆಯಾಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com