ಲಾಹೋರ್: ಫೆಬ್ರವರಿಯಲ್ಲಿ ಲಾಹೋರ್ ನ ಮಾಲ್ ರೋಡ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಶಂಕಿತ ಜಮಾತ್ ಉಲ್ ಅಹ್ರಾರ್ ಮತ್ತು ತೆಹ್ರೆಕ್-ಐ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಉಗ್ರ ಸಂಘಟನೆಯ ಹತ್ತು ಉಗ್ರರನ್ನು ಪಾಕಿಸ್ತಾನ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಪಂಜಾಬ್ ಪೊಲೀಸ್ ಭಯೋತ್ಪಾದನೆ ನಿಗ್ರಹ ಇಲಾಖೆ(ಸಿಟಿಡಿ) ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 10 ಮಂದಿಯನ್ನು ಹೊಡೆದುರುಳಿಸಿದೆ. ಇನ್ನು ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಆರು ಮಂದಿ ಪೊಲೀಸರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದರು. ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಜಮಾತ್ ಉಲ್ ಅಹ್ರಾರ್ ಹೊತ್ತುಕೊಂಡಿತ್ತು.
ಲಾಹೋರ್ ಮಾಲ್ ರೋಡ್ ನಲ್ಲಿ ಆತ್ಮಾಹುತಿ ಬಾಂಬ್ ನಡೆಸಿದ್ದ ಅನ್ವರುಲ್ ಹಕ್, ಇರ್ಫಾನ್ ಮತ್ತು ಇಮಾಮ್ ಕಾರ್ಯಚರಣೆಯಲ್ಲಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೃತ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.