ಭಾರತ-ಪಾಕ್ ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ಪುನಾರಂಭಿಸಬೇಕು: ಕಸೂರಿ

ಭಾರತ ಹಾಗೂ ಪಾಕಿಸ್ತಾನ ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ಪುನರಂಭ ಮಾಡಬೇಕು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಕರೆ ನೀಡಿದ್ದಾರೆ.
ಖುರ್ಷಿದ್ ಕಸೂರಿ
ಖುರ್ಷಿದ್ ಕಸೂರಿ
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ಪುನರಂಭ ಮಾಡಬೇಕು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಕರೆ ನೀಡಿದ್ದಾರೆ.
ಪಾಕಿಸ್ತಾನ ಕುಲಭೂಷಣ್ ಯಾದವ್ ಗೆ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ಪಾಕಿಸ್ತಾನ- ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಟ್ಟಿರುವ ಬೆನ್ನಲ್ಲೇ ಪಾಕ್ ವಿದೇಶಾಂಗ ಸಚಿವ ಕಸೂರಿ ಭಾರತ-ಪಾಕಿಸ್ತಾನ ಶಾಂತಿ ಮಾತುಕತೆಯ ಪ್ರಕ್ರಿಯೆಯನ್ನು ಪುನಾರಂಭ ಮಾಡಬೇಕೆಂಬ ಹೇಳಿಕೆ ನೀಡಿದ್ದಾರೆ. 
ಭಾರತ-ಪಾಕಿಸ್ತಾನ ವಿಲಕ್ಷಣ ದ್ವಿಪಕ್ಷೀಯ ಸಂಬಂಧ ಹೊಂದಿದೆ. ಸೌಮ್ಯ ನಿರ್ಲಕ್ಷ್ಯ ಧೋರಣೆ ಉಪಯೋಗವಾಗುವುದಿಲ್ಲ. ವಿವಾದಗಳನ್ನು ಮುಂದುವರೆಸುವುದಕ್ಕೆ ಅವಕಾಶ ನೀಡುವುದು ಬೇಡ ಎಂದು ಸೆಂಟರ್ ಫಾರ್ ಪೀಸ್ಽ ಪ್ರೋಗ್ರೆಸ್ ಆಯೋಜಿಸಿದ್ದ ಭಾರತ-ಪಾಕ್ ಸೆಮಿನಾರ್ ನಲ್ಲಿ ಕಸೂರಿ ಹೇಳಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ  ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ ಎಂಬುದನ್ನು ಪಾಕಿಸ್ತಾನ ವಿದೇಶಾಂಗ ಸಚಿವ ಕಸೂರಿ ಒಪ್ಪಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com