ಟೈಮ್ಸ್ ಮ್ಯಾಗಜಿನ್: 100 ಪ್ರಭಾವಿ ವ್ಯಕ್ತಿಗಳ ಆಯ್ಕೆಯಲ್ಲಿ ಪ್ರಧಾನಿ ಮೋದಿಗೆ ಶೂನ್ಯ ಮತ

ಟೈಮ್ ಮ್ಯಾಗಜಿನ್ ಓದುಗರ ಆನ್ ಲೈನ್ ಸಮೀಕ್ಷೆಯಲ್ಲಿ ಫಿಲಿಫೈನ್ಸ್ ನ ವಿವಾದಿತ ಅಧ್ಯಕ್ಷ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ನ್ಯೂಯಾರ್ಕ್: ಟೈಮ್ ಮ್ಯಾಗಜಿನ್ ಓದುಗರ ಆನ್ ಲೈನ್ ಸಮೀಕ್ಷೆಯಲ್ಲಿ ಫಿಲಿಫೈನ್ಸ್ ನ ವಿವಾದಿತ ಅಧ್ಯಕ್ಷ ರೊಡ್ರಿಗೊ ಡ್ಯುಟರ್ಟೆ ಅವರಿಗೆ ಮೊದಲ ಸ್ಥಾನ ಬಂದಿದೆ. ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಈ ಬಾರಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ವೋಟು ಸಹ ಸಿಕ್ಕಿಲ್ಲ.
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಇನ್ನು ಅನೇಕರ ವಿರುದ್ಧ ಹೇಳಿಕೆ ನೀಡಿದ್ದ ರೊಡ್ರಿಗೊ ಡ್ಯುಟರ್ಟೆ ಒಟ್ಟು ಹೌದು ಆಯ್ಕೆಯಲ್ಲಿ ಶೇಕಡಾ 5ರಷ್ಟು ಮತ ಗಳಿಸಿದ್ದಾರೆ. ಕಳೆದ ಮಧ್ಯರಾತ್ರಿ ವೋಟಿಂಗ್ ಪ್ರಕ್ರಿಯೆ ಮುಕ್ತಾಯವಾಗಿದೆ.
ಟೈಮ್ ಮ್ಯಾಗಜಿನ್ ಪ್ರತಿವರ್ಷ ನಡೆಸುವ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಓದುಗರಿಗೆ ಆನ್ ಲೈನ್ ಮೂಲಕ ಆಯ್ಕೆ ಮಾಡುವ ಅವಕಾಶ ನೀಡುತ್ತದೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಕೂಡ ಇದ್ದರು.
ಆದರೆ ಮೋದಿಯವರಿಗೆ ಒಂದೇ ಒಂದು ಯಸ್ ಮತ ಸಿಕ್ಕಿಲ್ಲ. ವೋಟಿಂಗ್ ಪ್ರಕ್ರಿಯೆ ಮುಗಿದ ನಂತರ ನೋಡಿದಾಗ ಮೋದಿಯವರಿಗೆ ಒಂದೇ ಒಂದು ವೋಟು ಸಿಕ್ಕಿರಲಿಲ್ಲ. ಅವರ ಜೊತೆ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಡೆಲ್ಲಾ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪುತ್ರಿ ಇವಾಂಕಾ, ಅವರ ಪತಿ ಜರೆದ್ ಕುಶ್ನರ್ ಕೂಡ ಇದ್ದರು. 
 ಕಳೆದ ವರ್ಷದ ಟೈಮ್ಸ್ 100 ಪ್ರಭಾವಿತರ ಪಟ್ಟಿಯಲ್ಲಿ ಮೋದಿಯವರು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದರು. 2015ರಲ್ಲಿ ಕೂಡ ಇದ್ದರು. ಬರಾಕ್ ಒಬಾಮಾ ಅವರು ಮ್ಯಾಗಜಿನ್ ನಲ್ಲಿ ಮೋದಿಯವರ ಬಗ್ಗೆ ಪರಿಚಯ ಬರಹ ಬರೆದಿದ್ದರು.
ಕಳೆದ ವರ್ಷ ಜೂನ್ ನಲ್ಲಿ ಅಧಿಕಾರ ಸ್ವೀಕರಿಸಿದ ಡ್ಯುಟರ್ಟ್ ಮಾದಕದ್ರವ್ಯದ ವಿರುದ್ಧ ದೇಶದಲ್ಲಿ ಹೋರಾಟವನ್ನೆಬ್ಬಿಸಿದ್ದರು. ಮಾದಕದ್ರವ್ಯ ಸೇವನೆಯಿಂದ ಫಿಲಿಫೈನ್ಸ್ ನಲ್ಲಿ 8,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಅವರ ಮಾದಕ ವಸ್ತು ವಿರೋಧಿ ಪ್ರಚಾರಕ್ಕೆ ಕೆಲವು ರಾಜಕೀಯ ನಾಯಕರಿಂದ ಮತ್ತು ಮಾನವ ಹಕ್ಕು ಕಾರ್ಯಕರ್ತರಿಂದ ಬೆಂಬಲ ಸಿಕ್ಕಿತ್ತು.
ಡ್ಯೂಟರ್ಟ್ ನಂತರ ಎರಡನೇ ಸ್ಥಾನದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯಾ, ಪೋಪ್ ಫ್ರಾನ್ಸಿಸ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಇದ್ದಾರೆ. ಇವರೆಲ್ಲರಿಗೂ ಶೇಕಡಾ 3ರಷ್ಟು ಹೌದು ಮತಗಳು ಸಿಕ್ಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com