25 ವರ್ಷದಿಂದ ಎಲೆ ಮತ್ತು ತೊಗಟೆಯನ್ನೇ ತಿಂದು ಬದುಕುತ್ತಿರುವ ಅಸಾಮಾನ್ಯ ವ್ಯಕ್ತಿ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವ್ಯಕ್ತಿಯೊರ್ವ ಕಳೆದ 25 ವರ್ಷದಿಂದ ಮರದ ಎಲೆ ಮತ್ತು ತೊಗಟೆಯನ್ನೇ ತಿಂದು ಬದುಕುತ್ತಿದ್ದಾನೆ...
ಮೊಹಮ್ಮದ್ ಭಟ್
ಮೊಹಮ್ಮದ್ ಭಟ್
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವ್ಯಕ್ತಿಯೊರ್ವ ಕಳೆದ 25 ವರ್ಷದಿಂದ ಮರದ ಎಲೆ ಮತ್ತು ತೊಗಟೆಯನ್ನೇ ತಿಂದು ಬದುಕುತ್ತಿದ್ದಾನೆ. 
ಗುರಂಜನ್ ವಾಲಾ ಮೂಲದ 50 ವರ್ಷ ಮೊಹಮ್ಮದ್ ಭಟ್ ಎಲೆ ತಿಂದು ಬದುಕುತ್ತಿದ್ದಾನೆ. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗಿಲ್ಲ. ತನ್ನ 25ನೇ ವಯಸ್ಸಿನಿಂದಲೇ ಎಲೆಗಳನ್ನು ತಿನ್ನಲು ಶುರು ಮಾಡಿದ ಮೊಹಮ್ಮದ್ ಭಟ್ ಯಾವುದೇ ಕೆಲಸ ಮಾಡದೇ ಇರುವುದರಿಂದ ಆತ ಊಟವನ್ನೇ ಬಿಟ್ಟುಬಿಟ್ಟಿದ್ದಾನೆ. 
ನನ್ನ ಕುಟುಂಬದಲ್ಲಿ ಬಡತನ ತಾಂಡವವಾಡುತ್ತಿತ್ತು ಹೀಗಾಗಿ ನಾನಗೆ ಅವಶ್ಯಕತೆಗಳು ಕಡಿಮೆ ಇರುತ್ತಿತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದ್ದರಿಂದ ನಾನು ಎಲೆಗಳನ್ನು ತಿನ್ನಲು ಪ್ರಾರಂಭಿಸಿದೆ. ನಂತರ ಅದೇ ನನ್ನ ಹವ್ಯಾಸವಾಯಿತು. ಇದೇ ರೀತಿ ಕಳೆದ 25 ವರ್ಷದಿಂದ ನಾನು ರೀತಿ ಎಲೆ ಮತ್ತು ತೊಗಟೆಯನ್ನು ತಿಂದು ಬದುಕುತ್ತಿದ್ದು ನಾನು ಯಾವುದೇ ರೀತಿಯ ಅನಾರೋಗ್ಯಕ್ಕೆ ಇಡಾಗಿಲ್ಲ ಎಂದು ಹೇಳಿದ್ದಾರೆ. 
ಸದ್ಯ ಕತ್ತೆಗಳ ಮೇಲೆ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ರವಾನಿಸುತ್ತಿದ್ದು ದಿನಕ್ಕೆ 600 ರುಪಾಯಿ ಸಂಪಾದಿಸುತ್ತಿದ್ದೇನೆ. ಆದರೆ ಈಗಲು ನಾನು ಎಲೆ ಮತ್ತು ತೊಗೆಟೆಯನ್ನು ತಿನ್ನುತ್ತಿದ್ದೇನೆ ಎಂದು ಮೊಹಮ್ಮದ್ ಭಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com