ಅಫ್ಘಾನಿಸ್ತಾನ: ನ್ಯಾಟೋ ಬೆಂಗಾವಲು ಪಡೆಯ ಮೇಲೆ ತಾಲೀಬಾನ್ ದಾಳಿ

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಉಗ್ರ ಸಂಘಟನೆ ನ್ಯಾಟೋ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದೆ.
ನ್ಯಾಟೋ ಬೆಂಗಾವಲು ಪಡೆಯ ಮೇಲೆ ತಾಲೀಬಾನ್ ದಾಳಿ
ನ್ಯಾಟೋ ಬೆಂಗಾವಲು ಪಡೆಯ ಮೇಲೆ ತಾಲೀಬಾನ್ ದಾಳಿ
ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಉಗ್ರ ಸಂಘಟನೆ ನ್ಯಾಟೋ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದೆ. 
ಕಂದಹಾರ್ ನ ದಕ್ಷಿಣ ಪ್ರಾಂತ್ಯದಲ್ಲಿ ದಾಳಿ ನಡೆದಿದ್ದು, ಉಗ್ರ ದಾಳಿಗೆ ತಾಲೀಬಾನ್ ಸಂಘಟನೆ ಹೊಣೆ ಹೊತ್ತಿದೆ. ಆತ್ಮಾಹುತಿ ದಾಳಿ ನಡೆಸುವ ಮೂಲಕ ತಾಲೀಬಾನ್ ಉಗ್ರ ಸಂಘಟನೆ ಭಯೋತ್ಪಾದಕ ದಾಳಿ ನಡೆಸಿದ್ದು, ಅಮೆರಿಕದ ನೆಲೆಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ದಾಳಿ ನಡೆದಿದೆ ಎಂದು ಅಲ್ಲಿನ ವಕ್ತಾರರು ಮಾಹಿತಿ ನೀಡಿದ್ದಾರೆ. 
ಭಯೋತ್ಪಾದಕ ದಾಳಿಯಲ್ಲಿ ಉಂಟಾದ ಸಾವು ನೋವುಗಳ ಬಗ್ಗೆ ಖಚಿತ ಮಾಹಿತಿ ಪಡೆಯಲು ಅಫ್ಘಾನಿಸ್ತಾನ ಭದ್ರತಾ ಪಡೆಗಳು ಯತ್ನಿಸುತ್ತಿದೆ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ನ್ಯಾಟೀ ಮಿಷನ್ 13,000 ಪಡೆಗಳನ್ನು ನಿಯೋಜಿಸಿದ್ದು, ಅಮೆರಿಕ 8,400 ಸೇನಾ ಪಡೆಗಳನ್ನು ನಿಯೋಜಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com