ಪಾಕ್ ಪಠ್ಯಪುಸ್ತಕದಲ್ಲಿ 'ಹಿಂದೂಗಳು ಕೊಲೆಗಡುಕರು': ಶಾಲಾ ಮಕ್ಕಳಿಗೆ ಭೋದನೆ

ದೇಶ ವಿಭಜನೆಯ ಆರೋಪವನ್ನು ಹಿಂದೂಗಳ ಮೇಲೆ ಹೊರಿಸಿ ಪಾಕಿಸ್ತಾನ ಪಠ್ಯ ಪುಸ್ತಕದಲ್ಲಿ ಹಿಂದೂಗಳು ಕೊಲೆಗಡುಕರು ಎಂದು ಶಾಲಾ ಮಕ್ಕಳಿಗೆ ಬೋಧಿಸುತ್ತಿದೆ...
ದೇಶ ವಿಭಜನೆಯ ಚಿತ್ರ
ದೇಶ ವಿಭಜನೆಯ ಚಿತ್ರ
ಇಸ್ಲಾಮಾಬಾದ್: ದೇಶ ವಿಭಜನೆಯ ಆರೋಪವನ್ನು ಹಿಂದೂಗಳ ಮೇಲೆ ಹೊರಿಸಿ ಪಾಕಿಸ್ತಾನ ಪಠ್ಯ ಪುಸ್ತಕದಲ್ಲಿ ಹಿಂದೂಗಳು ಕೊಲೆಗಡುಕರು ಎಂದು ಶಾಲಾ ಮಕ್ಕಳಿಗೆ ಬೋಧಿಸುತ್ತಿದೆ. 
ಭಾರತದ ವಿರುದ್ಧ ಸದಾ ದ್ವೇಷಕಾರುವ ಪಾಕಿಸ್ತಾನ ಇದೀಗ ಹಿಂದೂ ವಿರೋಧಿ ಅಂಶಗಳನ್ನೇ ಶಾಲಾಮಕ್ಕಳ ತಲೆಗೂ ತುರುಕುತ್ತಿದೆ. ದೇಶ ವಿಭಜನೆ ಬಗ್ಗೆ ಭಾರತ ಶಾಲಾ ಪಠ್ಯದಲ್ಲಿ ಒಂದು ರೀತಿ ಇದ್ದರೆ, ಪಾಕಿಸ್ತಾನದ ಪಠ್ಯದಲ್ಲಿ ಬೇರೆ ರೀತಿ ಇದೆ. ಇದನ್ನು ಬಳಿಸಿಕೊಂಡು ಮಕ್ಕಳಲ್ಲಿ ದ್ವೇಷ ಕಾರುವುದಕ್ಕೆ ಸೀಮಿತಗೊಳಿಸಿದೆ. 
ಇಂತರ ಪಠ್ಯಗಳಿಂದ ಶಾಲಾ ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು ಎರಡೂ ದೇಶಗಳ ಮಧ್ಯೆ ಸಾಮರಸ್ಯ ಮೂಡಿಸುವ ಯತ್ನಕ್ಕೆ ತೀವ್ರ ಹಿನ್ನಡೆಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. 
ದೇಶ ವಿಭಜನೆ ವೇಳೆ ಹಿಂದೂಗಳು ಪಾಕ್ ನಿಂದ ಭಾರತಕ್ಕೆ, ಭಾರತದಿಂದ ಮುಸ್ಲಿಂರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಇದು ಶತಮಾನದ ಅತಿ ದೊಡ್ಡ ವಲಸೆ ಎಂದು ಗುರುತಿಸಿಕೊಂಡಿದೆ. ಈ ವೇಳೆ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು ಸಾವಿರಾರೂ ಮಂದಿ ಸಾವಿಗೀಡಾಗಿದ್ದರು. ಇತಿಹಾಸವನ್ನು ಪಾಕಿಸ್ತಾನ ಸಂಪೂರ್ಣವಾಗಿ ತಿರುಚಿದ್ದು ಹಿಂದೂಗಳು ಮುಸ್ಲಿಂರನ್ನು ಹತ್ಯೆಗೈದರು, ಆಸ್ತಿ ಪಾಸ್ತಿ ನಾಶ ಮಾಡಿದರು. ಭಾರತದಿಂದ ಬಲವಂತವಾಗಿ ಮುಸ್ಲಿಂರನ್ನು ಹೊರದೂಡಿದರು. ಇದಾದ ನಂತರ ನಾವು ಪಾಕಿಸ್ತಾನವನ್ನು ರಚಿಸಿದೆವು ಎಂದು ಬರೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com