ಕುಲ್ಸೂಮ್ ನವಾಜ್
ಕುಲ್ಸೂಮ್ ನವಾಜ್

ನವಾಜ್ ಷರೀಫ್ ಪ್ರತಿನಿಧಿಸುತ್ತಿದ್ದ ಲಾಹೋರ್ ಕ್ಷೇತ್ರದಿಂದ ಪತ್ನಿ ಕುಲ್ಸೂಮ್ ನವಾಜ್ ನಾಮಪತ್ರ!

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಂಸತ್ ಸದಸ್ಯತ್ವವನ್ನು ಪಾಕ್ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ...
ಲಾಹೋರ್: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಂಸತ್ ಸದಸ್ಯತ್ವವನ್ನು ಪಾಕ್ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಲಾಹೋರ್ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ನವಾಜ್ ಷರೀಫ್ ಅವರ ಪತ್ನಿ ಕುಲ್ಸೂಮ್ ನವಾಜ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಲಾಹೋರ್ ಉಪ ಚುನಾವಣೆಯಲ್ಲಿ ನವಾಜ್ ಷರೀಫ್ ಅವರ ಪತ್ನಿಯನ್ನು ಕಣಕ್ಕಿಳಿಸಿಲು ನಿನ್ನೆ ಪಿಎಂಎಲ್-ಎನ್ ಪಕ್ಷ ನಿರ್ಧರಿಸಿತ್ತು. 
1999ರಲ್ಲಿ ಜನರಲ್ ಫರ್ವೇಜ್ ಮುಷರ್ರಫ್ ಅವರು ಪಾಕಿಸ್ತಾನ ಸೇನಾ ಆಡಳಿತ ಜಾರಿಗೊಳಿಸಿ ನವಾಜ್ ಷರೀಫ್ ಅವರನ್ನು ಬಂಧಿಸಿದಾಗ ಕುಲ್ಸೂಮ್ ಅವರು ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ ಇದುವರೆಗೆ ಚುನಾವಣೆ ಎದುರಿಸಿರಲಿಲ್ಲ. ಈಗ ಮೊದಲ ಬಾರಿಗೆ ಪತಿ ಕ್ಷೇತ್ರದಿಂದ ಕಣಕ್ಕಳಿದಿದ್ದಾರೆ.
ಈ ಮಧ್ಯೆ, ಪಾಕ್ ಮಾಜಿ ಪ್ರಧಾನಿಯ ಪತ್ನಿಯ ವಿರುದ್ಧ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದಿಂದ ಯಾಸ್ಮೀನ್ ರಶೀದ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com