ಫಿಲಪೀನ್ಸ್: ಡ್ರಗ್ಸ್ ಮಾರಾಟದ ವಿರುದ್ದ ಹೋರಾಟ: ಒಂದೇ ದಿನ 32 ಸಾವು

ಫಿಲಿಫೈನ್ಸ್ ಅಧ್ಯಕ್ಷ ರಾಡ್ರಿಗೋ ಡಟ್ಟರ್ಟೆ ಕಳೆದ ಒಂದು ವರ್ಷದಿಂದ ದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಾದಕವಸ್ತು ವ್ಯಾಪಾರ ತಡೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಿನ್ನೆ ಮಹತ್ವದ ಜಯ ಲಭಿಸಿದೆ
ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ಡಟ್ಟರ್ಟೆ
ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ಡಟ್ಟರ್ಟೆ
ಮನಿಲಾ: ಫಿಲಿಫೈನ್ಸ್ ಅಧ್ಯಕ್ಷ ರಾಡ್ರಿಗೋ ಡಟ್ಟರ್ಟೆ ಕಳೆದ ಒಂದು ವರ್ಷದಿಂದ ದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಡ್ರಗ್ಸ್ ವ್ಯಾಪಾರ ತಡೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ನಿನ್ನೆ ಮಹತ್ವದ ಜಯ ಲಭಿಸಿದೆ.  ಕಳೆದ 24  ಗಂಟೆಗಳಲ್ಲಿ  32 ಮಂದಿ ಶಂಕಾಸ್ಪದ ಡ್ರಗ್ಸ್ ಮಾರಾಟಗಾರರನ್ನು ಪೋಲೀಸರು ಹತ್ಯೆ ಮಾಡಿದ್ದಾರೆ. 
ಇಲ್ಲಿನ ಬುಲಕಾನ್ ಪ್ರಾಂತದಲ್ಲಿ ಮಂಗಳವಾರ ಹಾಗೂ ಬುಧವಾರ ನಡೆಸಿದ್ದ ಕಾರ್ಯಾಚರಣೆಯಲ್ಲಿ ಪೋಲಿಸರು 32  ಜನರನ್ನು ಕೊಂದು 107 ಮಂದಿಯನ್ನು ಬಂಧಿಸಿದ್ದಾರೆ. 
ಒಟ್ಟು 49 ಕಡೆ ನಡೆದ ದಾಳಿಯಲ್ಲಿ  367 ಚೀಲ ಮೀಥಾಂಫೆಟಮೈನ್ ಹೈಡ್ರೋಕ್ಲೋರೈಡ್ 765 ಗ್ರಾಂ ಗಾಂಜಾ, 2  ಗ್ರನೇಡ್ ಗಳು, 34 ಬಂದೂಕುಗಳು, ದೊರಕಿರುವುದಾಗಿ ಈಫೇಸ್ ಸುದ್ದಿ ವಾಹಿನಿಯು ತಿಳಿಸಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ ಪೋಲಿಸ್ ಕಾರ್ಯಾಚರಣೆಗಳಲ್ಲಿ 3,451 ಜನರು ಮೃತಪಟ್ಟಿದ್ದಾರೆ. 
ಕಳೆದ ಜುಲೈನಿಂದ ಇಲ್ಲಿಯವರೆಗೆ ಫಿಲಿಫೈನ್ಸ್ ನಲ್ಲಿ ಅಲ್ಲಿನ ಜಾಗೃತ ದಳಗಳು ನಡೆಸಿದ ಕರ್ಯಾಚರಣೆ ವೇಳೆ 7,000 ಮಂದಿ ಹತ್ಯೆಯಾಗಿದ್ದಾರೆ.ಇದರಿಂದ ದೇಶದಲ್ಲಿ ನಭಯ ಭೀತಿಯ ವಾತಾವರಣ ಏರ್ಪಟ್ಟಿದೆ. ಕೊಲೆಯಾದವರೆಲ್ಲರೂ ಶಂಕಿತ ಅಪರಾಧಿಗಳಷ್ಟೇ ಅಲ್ಲ ಅವರೆಲ್ಲರೂ ಡ್ರಗ್ಸ್ ಮಾರಾಟ ಜಾಲದ ಕುಖ್ಯಾತ ಅಪರಾಧಿಗಳಾಗಿದ್ದಾರೆ.ಎಂದು ಅಲ್ಲಿನ ಪೋಲಿಸರು ತಮ್ಮ ಕ್ರಮವನು ಸಮರ್ಥಿಸಿಕೊಂಡಿದ್ದಾರೆ. 
ಅಂತರಾಷ್ಟ್ರೀಯ ಸಂಘಟನೆಗಳು ಫಿಲಿಫೈನ್ಸ್ ಅಧ್ಯಕ್ಷರ ಈ ಕ್ರಮವನ್ನು ಬಲವಾಗಿ ಖಂಡಿಸಿದ್ದು ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com