ಜಪಾನ್ ಮೇಲೆ ಹಾರಿದ ಉತ್ತರ ಕೊರಿಯಾ ಪರಮಾಣು ಕ್ಷಿಪಣಿ

ಉತ್ತರ ಕೊರಿಯಾ ತನ್ನ ರಾಜಧಾನಿ ಪಯೋಗ್ಯಾಂಗ್ ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ.
ಜಪಾನ್ ಮೇಲೆ ಹಾರಿದ ಉತ್ತರ ಕೊರಿಯಾ ಪರಮಾಣು ಕ್ಷಿಪಣಿ
ಜಪಾನ್ ಮೇಲೆ ಹಾರಿದ ಉತ್ತರ ಕೊರಿಯಾ ಪರಮಾಣು ಕ್ಷಿಪಣಿ
Updated on
ಸಿಯೋಲ್, ದಕ್ಷಿಣ ಕೊರಿಯಾ: ಉತ್ತರ ಕೊರಿಯಾ ತನ್ನ ರಾಜಧಾನಿ ಪಯೋಗ್ಯಾಂಗ್ ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಈ ಕ್ಷಿಪಣಿಯು ಉತ್ತರ ಪೆಸಿಫಿಕ್ ಸಾಗರದಲ್ಲಿ ಮುಳುಗುವ ಮುನ್ನ ಜಪಾನ್ ಆಗಸದ ಮೇಲೆ ಹಾರಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಮೂಲಕ ಅಮೆರಿಕಾ ಮಿತ್ರತ್ವ ಹೊಂದಿರುವ ರಾಷ್ಟ್ರಗಳಿಗೆ ತನ್ನ ಪ್ರಬಲ ಸಂದೇಶ ರವಾನಿಸಿದೆ.
ಸಿಯೋಲ್ ನ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಹೇಳುವಂತೆ ಕ್ಷಿಪಣಿ ಸುಮಾರು 2,700 ಕಿಲೋಮೀಟರ್ (1,677 ಮೈಲುಗಳು) ಪ್ರಯಾಣಿಸಿ 550 ಕಿಲೋಮೀಟರ್ (341 ಮೈಲುಗಳು) ಗರಿಷ್ಠ ಎತ್ತರವನ್ನು ತಲುಪಿತು. ಉತ್ತರ ಕೊರಿಯಾದ ಹೊಕ್ಕೈಡೋ ದ್ವೀಪದತ್ತ ಹಾರಿತು. ಜಪಾನ್ ದೇಶವನ್ನು ಗುರಿಯಾಗಿಸಿಕೊಂಡು ಉತ್ತರ ಕೊರಿಯಾ ಪ್ರಯೋಗಿಸಿದ ಕ್ಷಿಪಣಿಗಳ ಪೈಕಿ ಮೊದಲ ಕ್ಷಿಪಣಿ ಉಡಾವಣೆ ಇದಾಗಿದೆ, ಆದರೂ ಕೆಲವರು ಉತ್ತರ ಕೊರಿಯಾ   ಉಪಗ್ರಹಗಳನ್ನು ಬಾಬಾಹ್ಯಾಕಾಶಕ್ಕೆ ಏರಿಸುವ ಪರೀಕ್ಷೆಯಲ್ಲಿ ತೊಡಗಿದೆ ಎಂದು ಹೇಳಿದರು. ಇದು ಉತ್ತರ ಕೊರಿಯಾದ ಮಹತ್ವಪೂರ್ಣ ಕ್ಷಿಪಣಿ ಪರೀಕ್ಷೆಯಾಗಿದ್ದರೂ ದಕ್ಷಿಣ ಕೊರಿಯಾ ಅಧಿಕಾರಿಗಳು ಇದನ್ನು ತಕ್ಷಣಕ್ಕೆ ದೃಢೀಕರಿಸಿರುವುದಿಲ್ಲ.
ಪ್ರತಿಯೊಂದು ಹೊಸ ಪರಮಾಣು ಕ್ಷಿಪಣಿಗಳ ಪರೀಕ್ಷೆಯು  ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರದ ಪ್ರಾಬಲ್ಯದತ್ತ ಒಂದು ಹೆಜ್ಜೆ ಹತ್ತಿರವಾಗುತ್ತಿದೆ, ಉತ್ತರ ಕೊರಿಯಾ ಈ ವರ್ಷ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಅಸಾಧಾರಣ ವೇಗದಲ್ಲಿ ಪ್ರಾರಂಭಿಸಿದೆ, 2021 ರಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮೊದಲ ಅವಧಿ ಮುಗಿಯುವುದಕ್ಕೆ ಮುನ್ನವೇ ಉತ್ತರ ಕೊರಿಯಾ ಅತಿ ಪ್ರಬಲವಾದ ಪರಮಾಣು ಕ್ಷಿಪಣಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಬಹುದೆಂದು  ಜಾಗತಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆಇದು ಅಮೆರಿಕಾ ಸೇರಿದಂತೆ ಜಾಗತಿಕ ಬಲಿಷ್ಟ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com