ನಾಗಸಾಕಿ ಅಣುಬಾಂಬ್ ದಾಳಿಯಲ್ಲಿ ಬದುಕುಳಿದಿದ್ದ ಪೋಸ್ಟ್ ಮ್ಯಾನ್ ನಿಧನ

1945ರಂದು ಅಮೆರಿಕ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆಸಿದ ವೇಳೆ ಅದೃಷ್ಟವಶಾತ್ ಬದುಕುಳಿದಿದ್ದ ಪೋಸ್ಟ್ ಮ್ಯಾನ್ 88 ವರ್ಷದ ಸುಮಿಟೆರು ಟಾನಿಗುಚಿ ..
ಸುಮಿಟೆರು ಟಾನಿಗುಚಿ
ಸುಮಿಟೆರು ಟಾನಿಗುಚಿ
ಟೊಕಿಯೋ: 1945ರಂದು ಅಮೆರಿಕ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆಸಿದ ವೇಳೆ ಅದೃಷ್ಟವಶಾತ್ ಬದುಕುಳಿದಿದ್ದ ಪೋಸ್ಟ್ ಮ್ಯಾನ್ 88 ವರ್ಷದ ಸುಮಿಟೆರು ಟಾನಿಗುಚಿ ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸುಮಿಟೆರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಮಿಟೆರು ಅವರನ್ನು ಒಮ್ಮೆ ನೊಬೆಲ್ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. 2ನೇ ವಿಶ್ವಯುದ್ಧ ನಡೆಯುತ್ತಿದ್ದ ವೇಳೆ ಸುಮಿಟೆರು 16 ವರ್ಷದ ಹುಡುಗನಾಗಿದ್ದರು, ಅಂದು ಬಾಂಬ್ ದಾಳಿ ನಡೆದಾಗ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಣ್ಣೆದುರೇ ಅಣು ಬಾಂಬ್ ದಾಳಿಯಾಗಿತ್ತು, 
ದಾಳಿಯ ಪರಿಣಾಮ ಸುಮಿಟೆರು ಅವರ ಹಿಂಬೆನ್ನು ಸುಟ್ಟು ಹೋಗಿತ್ತು. ಎಡಕೈ ಕೂಡಾ ಸುಟ್ಟು ಹೋಗಿತ್ತು. ಬಾಂಬ್ ಬ್ಲಾಸ್ಟ್ ನಡೆದ ಸ್ಥಳದಿಂದ ಸುಮಾರು 1.8 ಕಿಮೀ ದೂರ ಸೈಕಲ್ ನಲ್ಲೇ ಕ್ರಮಿಸಿದ್ದರು. 2015 ರಲ್ಲಿ ನಡೆದ ನಾಗಸಾಕಿ ಸ್ಮರಣಾರ್ಥ ಸಮಾರಂಭದಲ್ಲಿ ಅಂದು ನಡೆದಿದ್ದ ಘಟನೆ ಬಗ್ಗೆ ಸುಮಿಟೆರು ಸ್ಮರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com