ಸೊಳ್ಳೆ ಸಾಯಿಸಿದ್ದಕ್ಕೆ ಜಪಾನಿ ವ್ಯಕ್ತಿಗೆ ಟ್ವೀಟರ್‌ನಿಂದ ನಿಷೇಧ

ಸಾಮಾಜಿಕ ಸಂಪರ್ಕ ಜಾಲತಾಣ ಟ್ವೀಟರ್ ನಲ್ಲಿ ಸೊಳ್ಳೆಯನ್ನು ಕೊಂದ ಫೋಸ್ಟ್ ಆಗಿದ್ದ ಜಪಾನಿ ವ್ಯಕ್ತಿಯ ಖಾತೆಯನ್ನು ಟ್ವೀಟರ್ ನಿಂದಲೇ ಬ್ಯಾನ್ ಮಾಡಲಾಗಿದೆ...
ಟ್ವೀಟರ್
ಟ್ವೀಟರ್
ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಸಂಪರ್ಕ ಜಾಲತಾಣ ಟ್ವೀಟರ್ ನಲ್ಲಿ ಸೊಳ್ಳೆಯನ್ನು ಕೊಂದ ಫೋಸ್ಟ್ ಆಗಿದ್ದ ಜಪಾನಿ ವ್ಯಕ್ತಿಯ ಖಾತೆಯನ್ನು ಟ್ವೀಟರ್ ನಿಂದಲೇ ಬ್ಯಾನ್ ಮಾಡಲಾಗಿದೆ. 
ಟ್ವೀಟರ್ ಬಳಕೆದಾರ @nemuismywife ಟಿವಿ ನೋಡುತ್ತಿದ್ದಾಗ ಆತನನ್ನು ಸೊಳ್ಳೆ ಕಚ್ಚಿದೆ. ಕೂಡಲೇ ಆತ ಅದನ್ನು ಕೊಂದು ಫೋಟೋವನ್ನು ಟ್ವೀಟರ್ ನಲ್ಲಿ ಹಾಕಿದ್ದ ಇದಕ್ಕೆ ಟ್ವೀಟರ್ ಆತನ ಬ್ಲಾಗ್ ಅನ್ನು ಬ್ಯಾನ್ ಮಾಡಿತ್ತು. 
ನಂತರ @DaydreamMatcha ಹೆಸರಲ್ಲಿ ನೂತನ ಟ್ವೀಟರ್ ಖಾತೆಯನ್ನು ತೆರೆದ ಜಪಾನಿ ವ್ಯಕ್ತಿ ತನ್ನ ಖಾತೆಯನ್ನು ಟ್ವೀಟರ್ ಬ್ಯಾನ್ ಮಾಡಿದ್ದು, ಸೊಳ್ಳೆಯನ್ನು ಸಾಯಿಸಿದ್ದು ಹಿಂಸಾಚಾರವೇ? ಪ್ರಶ್ನಿಸಿ ಸಂದೇಶ ಹಾಕಿದ್ದಾನೆ. ಇದಕ್ಕೆ 31 ಸಾವಿರ ರೀಟ್ವೀಟ್ ಗಳು ಬಂದಿವೆ. ಅಲ್ಲದೆ 27 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 
ಟ್ವೀಟರ್ ನ ಈ ಕೃತ್ಯವನ್ನು ಹಲವರು ಪ್ರಶ್ನಿಸಿದ್ದಾರೆ. ಇನ್ನು ಸೊಳ್ಳೆ ಸಾಯಿಸಿದ್ದಕ್ಕೆ ಟ್ವೀಟರ್ ಜಪಾನಿ ವ್ಯಕ್ತಿಯ ಖಾತೆಯನ್ನು ಬ್ಯಾನ್ ಮಾಡಿರುವುದು ಹಾಸ್ಯಾಸ್ಪದ ಎಂದು ಟ್ವೀಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com