ಹಜ್ ಯಾತ್ರೆ ಪ್ರಾರಂಭಿಸಿದ ಎರಡು ದಶಲಕ್ಷ ಮುಸ್ಲಿಮರು

ವಿಶ್ವದಾದ್ಯಂತದ ಸುಮಾರು ಎರಡು ಮಿಲಿಯನ್ ಮುಸ್ಲಿಮರು ಇಸ್ಲಾಂನ ಪವಿತ್ರ ತಾಣಗಳಲ್ಲಿ ಹಜ್ ತೀರ್ಥಯಾತ್ರೆ ಪ್ರಾರಂಭಿಸಿದರು, ಧಾರ್ಮಿಕ ಕರ್ತವ್ಯ ಮತ್ತು ಬಹು ಹಂತದ ಆಧ್ಯಾತ್ಮಿಕ ಪ್ರಯಾಣದಲ್ಲಿ ಅವರು ತೊಡಗಿದ್ದರು.
ಹಜ್ ತೀರ್ಥಯಾತ್ರೆ
ಹಜ್ ತೀರ್ಥಯಾತ್ರೆ
Updated on
ಸೌದಿ ಅರೇಬಿಯಾ: ವಿಶ್ವದಾದ್ಯಂತದ ಸುಮಾರು ಎರಡು ಮಿಲಿಯನ್ ಮುಸ್ಲಿಮರು ಇಸ್ಲಾಂನ ಪವಿತ್ರ ತಾಣಗಳಲ್ಲಿ ಹಜ್ ತೀರ್ಥಯಾತ್ರೆ ಪ್ರಾರಂಭಿಸಿದರು, ಧಾರ್ಮಿಕ ಕರ್ತವ್ಯ ಮತ್ತು ಬಹು ಹಂತದ ಆಧ್ಯಾತ್ಮಿಕ ಪ್ರಯಾಣದಲ್ಲಿ ಅವರು ತೊಡಗಿದ್ದರು.
ಈ ವರ್ಷ ಶಿಯೆಟ್ ಇರಾನ್ ನ ಯಾತ್ರಿಕರು ಸೌದಿ ಅರೇಬಿಯಾದಲ್ಲಿರುವ ಮೆಕ್ಕಾಗೆ ಮರಳಿ ಬಂದಿದ್ದಾರೆ. 2015 ರಲ್ಲಿ ನಡೆದ ಮಾರಣಾಂತಿಕ ಸ್ಪೋಟ ಮತ್ತು ರಾಜತಾಂತ್ರಿಕ ಹಗರಣದ ನಂತರ ಇರಾನ್ ನ ಜನರ ಮೊದಲ ಭೇಟಿ ಇದಾಗಿದೆ. 
ಗಲ್ಫ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಹೊರತಾಗಿಯೂ ಈ ಯಾತ್ರೆ ಯಶಸ್ವಿಯಾಗಿ ಪೂರೈಸುತ್ತದೆ.
ಮೆಕ್ಕಾದ ಮುಖ್ಯ ಮಸೀದಿಯ ಒಳಾಂಗಣದಲ್ಲಿ, ಪ್ರಪಂಚದ ಎಲ್ಲಾ ನಾಲ್ಕು ಮೂಲೆಗಳಿಂದ ಜನರೂ ಸೇರಿದ್ದು, ಎಲ್ಲಾ ಮುಸ್ಲಿಮರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ನಿರ್ವಹಿಸಬೇಕಾದ ತೀರ್ಥಯಾತ್ರೆ ಎನ್ನುವುದಾಗಿ ಇದನ್ನು ಭಾವಿಸುತ್ತಾರೆ..
ಬೆನಿನ್ ನ ಸಾರ್ವಜನಿಕ ಸೇವೆಯ ಸಲಹೆಗಾರರಾದ ಟಿಜ್ಜಾನಿ ಟ್ರೌರ್ ಅವರು 53 ನೇ ವಯಸ್ಸಿನಲ್ಲಿ 22 ನೇ ಬಾರಿ ಮೆಕ್ಕಾ ಯಾತ್ರೆಗೆ ಬಂದಿರುವುದಾಗಿ ಹೇಳಿದರು.
"ಪ್ರತಿ ಬಾರಿ, ಹೊಸ ಅನುಭವಗಳು ಆಗುತ್ತವೆ," ಅವರು ಹೇಳಿದರು. "ಯಾತ್ರಿಕರನ್ನು ಸಂಘಟಿಸಲು ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಈಗ ಉತ್ತಮ ಅನುಕೂಲ ಕಲ್ಪಿಸಲಾಗಿದೆ. ಉದಾಹರಣೆಗೆ, ಡೇರೆಗಳು ಹವಾನಿಯಂತ್ರಿತವಾಗಿವೆ." ಅವರು ತಿಳಿಸಿದರು.
ಮುಸ್ಲಿಂ ಬಾಂಧವರಿಗೆ ಮೆಕ್ಕಾ, ಮದೀನಾ ಯಾತ್ರೆಗಳು ಜೀವನದ ಅಾತ್ಯಂತ ಮಹತ್ವದ ಘಟನೆಗಳಾಗುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com