ಯುಎಸ್ ಕಾಂಗ್ರೆಸ್ ಗೆ ಸ್ಪರ್ಧಿಸಲಿರುವ ಭಾರತೀಯ ಅಮೆರಿಕನ್ ಪತ್ರಕರ್ತೆ ವಂದನಾ ಜಿಂಘನ್

ಮುಂಬರುವ ಅಮೆರಿಕ ಕಾಂಗ್ರೆಸ್ ಚುನಾವಣೆಗೆ ಭಾರತೀಯ ಅಮೆರಿಕನ್ ಪತ್ರಕರ್ತೆ ವಂದನಾ ಜಿಂಘನ್ ಸ್ಪರ್ಧಿಸುವುದಾಗಿ ಘೋಷಿಸಿದಾರೆ.
ವಂದನಾ ಜಿಂಘನ್
ವಂದನಾ ಜಿಂಘನ್
ವಾಷಿಂಗ್ ಟನ್: ಮುಂಬರುವ ಅಮೆರಿಕ ಕಾಂಗ್ರೆಸ್ ಚುನಾವಣೆಗೆ ಭಾರತೀಯ ಅಮೆರಿಕನ್ ಪತ್ರಕರ್ತೆ ವಂದನಾ ಜಿಂಘನ್ ಸ್ಪರ್ಧಿಸುವುದಾಗಿ ಘೋಷಿಸಿದಾರೆ. 
ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ಗೆ ಚಿಕಾಗೋದ ಉಪನಗರದಿಂದ ಸ್ಪರ್ಧಿಸುವುದಾಗಿ ವಂದನಾ ತಿಳಿಸಿದ್ದು, ಕಳೆದ ವರ್ಷ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಡೆಮಾಕ್ರೆಟಿಕ್ ಪಕ್ಷದ ಭಾರತೀಯ ಅಮೆರಿಕನ್ ರಾಜಾ ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಭಾರತೀಯ ಅಮೆರಿಕನ್ ಆಗಿರುವ ಜಿತೇಂದರ್ ಜೆಡಿ ಡಿಜಿನ್ವಕರ್ ಎಂಬುವವರು ರಿಪಬ್ಲಿಕನ್ ಪಕ್ಷದಿಂದ ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದರು.  
ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಬೇಕಾದರೆ ವಂದನಾ ಹಾಗೂ ಜಿತೇಂದರ್ ಜೆಡಿ ಡಿಜಿನ್ವಕರ್ ಇಬ್ಬರೂ ಭಾರತೀಯ ಮೂಲದವರು ಹೆಚ್ಚಿರುವ ಪ್ರದೇಶದಲ್ಲಿ ಮಾ.8 ರಂದು ನಡೆಯಲಿರುವ ರಿಪಬ್ಲಿಕನ್ ಪ್ರಾಥಮಿಕ ಚುನಾವಣೆಯನ್ನು ಎದುರಿಸಿ ಗೆಲ್ಲಬೇಕಾಗುತ್ತದೆ.  
ವಂದನಾ, ಟಿವಿ ಏಷಿಯಾದ ಮಿಡ್ ವೆಸ್ಟ್ ಬ್ಯೂರೋ ಮುಖ್ಯಸ್ಥರಾಗಿದ್ದು 20 ವರ್ಷ ನನ್ನ ಸಮುದಾಯಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ, ಅಮೆರಿಕನ್ನರ ಕನಸುಗಳನ್ನು ಈಡೇರಿಸಲು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com