ಅಮೆರಿಕ: ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರು ಕೆಲಸ ಮಾಡುವಂತಿಲ್ಲ
ಅಮೆರಿಕ: ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರು ಕೆಲಸ ಮಾಡುವಂತಿಲ್ಲ

ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರ ಕೆಲಸಕ್ಕೆ ಕತ್ತರಿ ಹಾಕಲು ಅಮೆರಿಕಾ ಚಿಂತನೆ

ಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ನೀಡುವ ಎಚ್ 1ಬಿ ವೀಸಾ ಹೊಂದಿರುವರ ಪತ್ನಿಯರು ತಂತ್ರಜ್ಞಾನದ ಉದ್ಯೋಗಗಳಂತಹಾ ..........
ವಾಷಿಂಗ್ ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ನೀಡುವ ಎಚ್ 1ಬಿ ವೀಸಾ ಹೊಂದಿರುವರ ಪತ್ನಿಯರು ತಂತ್ರಜ್ಞಾನದ ಉದ್ಯೋಗಗಳಂತಹಾ  ಪ್ರಮುಖ ಜಾಲದಿಂದ ಹೊರಗುಳಿಯ ಬೇಕಾಗಬಹುದು. 2015 ರಿಂದಲೂ, ಎಚ್ 1ಬಿ ಯ ವೀಸಾ ಅಥವಾ ಹೆಚ್ಚಿನ-ನುರಿತ ವೀಸಾ ಹೊಂದಿರುವವರು ಗ್ರೀನ್ ಕಾರ್ಡ್ ಗಾಗಿ ಗಿ ಕಾಯುತ್ತಿದ್ದಾರೆ, ಅವರು ಎಚ್ -4 ವೀಸಾಗಳಲ್ಲಿ ಅಮೆರಿಕಾ ದಲ್ಲಿ ಕೆಲಸ ಮಾಡಲು ಅರ್ಹತೆ ಹೊಂದಿರುತ್ತಾರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತವು ಈ ನಿಯಮವನ್ನು ಸೇರಿಸಿತ್ತು ಎಂದು  ಸಿಎನ್ ಎನ್ ವರದಿ ಮಾಡಿದೆ.
ತಂತ್ರಜ್ಞಾನ ಕ್ಷೇತ್ರವು ಎಚ್ 1ಬಿ ವೀಸಾ ಹೊಂದಿರುವವರ ಪ್ರಮುಖ ಉದ್ಯೋಗ ಕ್ಷೇತ್ರವಾಗಿದೆ. ಆದರೆ, ಹೋಮ್ ಲ್ಯಾಂಡ್ ರಕ್ಷಣಾ ಇಲಾಖೆ ಈ ನಿಯಮವನ್ನು ದೂರವಿಡಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ. ಹೇಗಾದರೂ, ಇಲಾಖೆ ತನ್ನ ಈ ನಿರ್ಧಾರಕ್ಕೆ ಕಾರಣಗಳನ್ನು ತಿಳಿಸಿಲ್ಲ, ಟ್ರಂಪ್ ಕಳೆದ ಏಪ್ರಿಲ್ ನಲ್ಲಿ ಸಹಿ ಮಾಡಿದ್ದ "ಬೈ ಅಮೇರಿಕನ್, ಹೈರ್ ಅಮೇರಿಕನ್" ಆದೇಶವನ್ನು ನಾವು ಪಾಲಿಸುತ್ತೇವೆ ಎಂದಿದೆ. ಆದರೆ ನಿಯಮವನ್ನು ತೆಗೆದು ಹಾಕಲು ಔಪಚಾರಿಕ ಪ್ರಕ್ರಿಯೆಯನ್ನು ಇನ್ನಷ್ಟೇ ಪ್ರಾರಂಭಿಸಬೇಕಿದೆದೆ.
ಪತ್ನಿಯರು ಕೆಲಸ ಮಾಡಲು ಅನುಮತಿಸುವ ನಿಯಮವನ್ನು ಬಿಡುವುದರ ಜೊತೆಗೆ, ಹೋಂ ಲ್ಯಾಂಡ್ ರಕ್ಷಣಾ ಹೇಳಿಕೆ ಇಲಾಖೆ ಎಚ್ 1ಬಿ ವೀಸಾ ನಿಯಮಗಳಲ್ಲಿ ಇತರ ಬದಲಾವಣೆಗಳನ್ನು ತರುವುದಾಗಿಯೂ ತಿಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com