ಫರ್ವೇಜ್ ಮುಷರ್ರಫ್
ವಿದೇಶ
ಎಲ್ ಇಟಿ, ಜೆಯುಡಿ ಉಗ್ರರು 'ದೇಶ ಭಕ್ತರು' ಎಂದು ಹಾಡಿ ಹೊಗಳಿದ ಮುಷರ್ರಫ್
ಲಷ್ಕರೆ ಇ ತೊಯ್ಬಾ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಗಳಿಗೆ 'ದೇಶ ಭಕ್ತಿ' ಇದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ....
ಕರಾಚಿ: ಲಷ್ಕರೆ ಇ ತೊಯ್ಬಾ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಗಳಿಗೆ 'ದೇಶ ಭಕ್ತಿ' ಇದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಉಗ್ರರನ್ನು ಹಾಡಿ ಹೊಗಳಿದ್ದಾರೆ.
ಎಲ್ ಇಟಿ ಮತ್ತು ಜೆಡಿಯುಡಿ ದೇಶ ಭಕ್ತಿಯನ್ನು ಹೊಂದಿದ್ದು, ಪಾಕಿಸ್ತಾನದ ರಕ್ಷಣೆ ಮತ್ತು ಭದ್ರತೆಗಾಗಿ ಅವರೊಂದಿಗೆ ಮೈತ್ರಿಮಾಡಿಕೊಳ್ಳಲು ತಾವು ಸಿದ್ಧ ಎಂದು ಮುಷರಫ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ದೇಶದಿಂದ ಸ್ವಯಂ ಗಡಿಪಾರು ಆಗಿ ದುಬೈನಲ್ಲಿ ನೆಲೆಸಿರುವ 74 ವರ್ಷದ ಮುಷರ್ರಫ್ ಅವರು ಇತ್ತೀಚಿಗಷ್ಟೇ ಎಲ್ ಇಟಿ ಮತ್ತು ಅದರ ಸಂಸ್ಥಾಪಕ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಅವರ ದೊಡ್ಡ ಬೆಂಬಲಿಗ ಎಂದು ಹೇಳಿದ್ದರು.
ಎಲ್ ಇಟಿ ಮತ್ತು ಜೆಯುಡಿ ಜನ ದೇಶ ಭಕ್ತರು. ಅವರು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕಾಗಿ ತಮ್ಮ ಜೀವ ಕೊಟ್ಟಿದ್ದಾರೆ. ಹೀಗಾಗಿ ಅವರು ಅತ್ಯಂತ ದೊಡ್ಡ ದೇಶ ಭಕ್ತರು ಎಂದು ಮುಷರ್ರಫ್ ಹೇಳಿರುವುದಾಗಿ ಎಆರ್ ವೈ ಸುದ್ದಿ ವಾಹಿನಿ ವರದಿ ಮಾಡಿದೆ.
ಈ ಎರಡು ಉಗ್ರ ಸಂಘಟನೆಗಳಿಗೆ ಸಾರ್ಜನಿಕರ ಭಾರಿ ಬೆಂಬಲವಿದೆ ಮತ್ತು ಅವರು ಉತ್ತಮ ಜನರಾಗಿದ್ದು, ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ ಯಾರೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ